ಹುಣಸಗಿ: ‘ಬಸವಣ್ಣನವರ ತತ್ವ ಹಾಗೂ ವಚನಗಳ ಸಾರ ತಿಳಿದಕೊಂಡರೆ ವ್ಯಾಜ್ಯ ರಹಿತ ಸಮಾಜ ನಿರ್ಮಾಣ ಸಾಧ್ಯ’ ಎಂದು ಶರಣ ಎನ್.ಆರ್.ಪಾಟೀಲ ಹೇಳಿದರು.

ಹುಣಸಗಿ ಪಟ್ಟಣದಲ್ಲಿ ಶಿವಕುಮಾರ ಬಂಡೋಳಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಪಠಣ ಹಾಗೂ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಸಮ ಸಮಾಜ ನಿರ್ಮಾಣದ ಕನಸಿಕೊಂಡಿಗೆ ಎಲ್ಲ ಶ್ರಮಿಕ ವರ್ಗದ ಜನರಿಗೂ ಭಕ್ತಿಯ ಜೊತೆಗೆ ಧರ್ಮ ಮಾರ್ಗದ ತಿರುಳನ್ನು ತಿಳಿಸಿಕೊಟ್ಟವರು. ಶರಣ ತತ್ವದಲ್ಲಿ ಎಲ್ಲರೂ ಸಮಾನರು ಎಂಬ ಕಲ್ಪನೆಯನ್ನು ಕಟ್ಟಿಕೊಟ್ಟಿದ್ದಾರೆ’ ಎಂದರು.

ಬಸವಣ್ಣ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಹಿಳೆಯರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪಾರ್ವತಿ ಮೇಲಿನಮನಿ, ವಿಜಯಲಕ್ಷ್ಮಿ ದೇಸಾಯಿ, ಲಲೀತಾ ಚಿಂಚೋಳಿ, ಕವಿತಾ ರೇವಡಿ, ರೇಖಾ ಬ್ಯಾಕೋಡ, ಶಶಿಕಲಾ ಹಿರೇಮಠ, ಸಂಗಮ್ಮ ಸಜ್ಜನ, ರಂಗಮ್ಮ ಬಿರಾದಾರ, ಕವಿತಾ ಪಡಶೆಟ್ಟಿ, ಸಂಗಮ್ಮ ಬಂಡೋಳಿ, ವಿಜಯಲಕ್ಷ್ಮಿ ತಂಬಾಕಿ ಸೇರಿದಂತೆ ಇತರರು ಇದ್ದರು.

ಬೋರಮ್ಮ ಯಡಿಯೂರಮಠ ಪ್ರಾರ್ಥಿಸಿದರು. ಶರಣಮ್ಮ ಬಂಡೊಳ್ಳಿ ಸ್ವಾಗತಿಸಿದರು. ಅಕ್ಕಮಹಾದೇವಿ ನಿರೂಪಿಸಿದರು. ನಾಗನಗೌಡ ಪಾಟೀಲ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-30-1671308507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.