ಹುನಗುಂದ: ಮೂಲಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಇದ್ದಲಗಿ ಗ್ರಾಮದ ಸಂತ್ರಸ್ತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 29ನೇ ದಿನವಾದ ಬುಧವಾರವೂ ಮುಂದುವರಿದಿದೆ.

ಶೇಖಪ್ಪ ಆನೆಹೊಸೂರ, ಶರಣಪ್ಪ ವಾಲಿಕಾರ, ಕಲ್ಲಪ್ಪ ಆನೆಹೊಸೂರ, ಮಹಾಂತೇಶ ಆನೆಹೊಸೂರ, ಹೇಮವ್ವ ವಾಲಿಕಾರ, ಮೀನಾಕ್ಷಿ ಗಂಜೀಹಾಳ, ಸರೋಜಮ್ಮ ಹಿರೇಮಠ, ಪಾರ್ವತಮ್ಮ ಮಠದ ಪಾಲ್ಗೊಂಡಿದ್ದರು.

ಗ್ರಾಮದ ಧರಣಿ ನಿರತ ಸಂತ್ರಸ್ತರಿಗೆ ಪುನರ್ವಸತಿ ಕೇಂದ್ರದಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಸಿಎಸ್ಆರ್ ನಿಧಿ ಬಳಸಿ ಸಂತ್ರಸ್ತರಿಗೆ ಅವಶ್ಯವಿರುವ 350 ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಮತ್ತು ಭೂ ಸ್ವಾಧೀನ ಇಲಾಖೆಯ ಮಹಾ ವ್ಯವಸ್ಥಾಪಕರಿಗೆ ಮೇ 29ರಂದು ಸಂತ್ರಸ್ತರ ಪರವಾಗಿ ಗ್ರಾಮದ ಶರಣಪ್ಪ ಮುಳ್ಳೂರ ಹಾಗೂ ಸರೋಜ ಹಿರೇಮಠ ಅವರು ಮನವಿ ಸಲ್ಲಿಸಿದ್ದಾರೆ.

ಸಂತ್ರಸ್ತರ ಪೂರ್ವಭಾವಿ ಸಭೆ 5ರಂದು: ನಾರಾಯಣಪುರ ಹಿನ್ನೀರು ಹಾಗೂ ಮಲಪ್ರಭಾ ನದಿ ಪ್ರವಾಹ ಬಾಧಿತ 10 ಗ್ರಾಮಗಳ ಸಂತ್ರಸ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೂಡಲಸಂಗಮ ಪಾದಯಾತ್ರೆ ಮತ್ತು ಸಂತ್ರಸ್ತರ ಸಮಾವೇಶದ ತಯಾರಿ ಕುರಿತು ತಾಲ್ಲೂಕಿನ ಇದ್ದಲಗಿ ಗ್ರಾಮದ ಮಹಾಂತೇಶ ಮಠದ ಆವರಣದಲ್ಲಿ ಜೂನ್ 5 ರಂದು ಸಂಜೆ 4ಕ್ಕೆ ಪೂರ್ವಭಾವಿ ಸಭೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಅಂದು ನಡೆಯುವ ಸಭೆಯಲ್ಲಿ ಹಡಗಲಿ-ನಿಡಗುಂದಿಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ನಂದವಾಡಗಿ ಮಹಾಂತ ಸ್ವಾಮೀಜಿ, ಅಭಿನವ ಚನ್ನಬಸವ ದೇವರು, ಬಿಲ್ಕೆರೂರಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಅಮೀನಗಡ ಗಚ್ಚಿನಮಠದ ಪ್ರಭುಶಂಕರ ರಾಜೇಂದ್ರ ಸ್ವಾಮೀಜಿ, ಕೆಲೂರಿನ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ , ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು, ಏಕಪ್ಪಯ್ಯ ಗ್ಯಾನಪ್ಪಯ್ಯನವರ ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು ಎಂದು ಮುಖಂಡ ಹಸನ್ ಪಿಂಜಾರ ಪ್ರಕಟಣೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-19-1978947610

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.