ಶುಕ್ರವಾರ, ಅಕ್ಟೋಬರ್ 23, 2020
21 °C
12ರಲ್ಲಿ 11 ಸ್ಥಾನಗಳಲ್ಲಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತರು

ಟಿಎಪಿಸಿಎಂಎಸ್ ಚುನಾವಣೆ:ಕಾಂಗ್ರೆಸ್ ಬೆಂಬಲಿತರಿಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುನಗುಂದ: ಹುನಗುಂದ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೆ (ಟಿಎಪಿಸಿಎಂಎಸ್)  5 ವರ್ಷದ ಅವಧಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯಗಳಿಸಿದ್ದಾರೆ. ಬಿಜೆಪಿ ಬೆಂಬಿಲಿತ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಕೆಂದ್ರ ಶಾಲೆಯಲ್ಲಿ ಇಂದು ನಡೆದ ಮತದಾನದಲ್ಲಿ ‘ಸಿ’ ವರ್ಗದ (ವ್ಯಕ್ತಿಗತ) ಮಹಿಳಾ ಕ್ಷೇತ್ರದ 2 ಸ್ಥಾನಗಳಿಗೆ ಗಿರಿಜಾ ಮ. ಗಂಜಿಹಾಳ (373), ಮಹಾಂತಮ್ಮ ಮು.ಹೊಸುರು (361). ಪರಿಶಿಷ್ಟ ಜಾತಿಯ ಒಂದು ಸ್ಥಾನಕ್ಕೆ ರಾಮಣ್ಣ ಭಜಂತ್ರಿ (332) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

‘ಎ’ ವರ್ಗ (ಸದಸ್ಯ ಸಂಘಗಳಿಂದ) 4 ಸ್ಥಾನಕ್ಕೆ ಕ್ರಮವಾಗಿ ಪಿಕೆಪಿಎಸ್ ಹಿರೇಶಿಂಗನಗುತ್ತಿಯಿಂದ ಮಹಾಂತೇಶ ಬ. ಪಾಟೀಲ (27), ಪಿಕೆಪಿಎಸ್ ರಾಮಥಾಳದಿಂದ ಮತ್ತಪ್ಪ ಮುಳ್ಳೂರ (26), ಪಿಕೆಪಿಎಸ್ ಹಿರೇಓತಗೇರಿಯಿಂದ ನಿಂಗಪ್ಪ ಹಂಚಿನಾಳ (22) ಎಲ್ಲರೂ ಕಾಂಗ್ರಸ್ ಬೆಂಬಲಿತ ಅಭ್ಯರ್ಥಿಗಳು. ಪಿಕೆಪಿಎಸ್ ತುಂಬದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಮರಯ್ಯ ಮ.ಹಿರೇಮಠ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಬಸವಂತಪ್ಪ ಅಂಟರತಾನಿ, ಮಹಾಲಿಂಗಯ್ಯ ಹಿರೇಮಠ, ಹಿಂದುಳಿದ ವರ್ಗದ ಅ ಕ್ಷೇತ್ರದಿಂದ ಜೈನಸಾಬ್ ಹಗೇದಾಳ, ಹಿಂದುಳಿದ ವರ್ಗದ ಬ ಕ್ಷೇತ್ರದಿಂದ ಬಸವರಾಜ ಬಂಗಾರಿ, ಪರಿಶಿಷ್ಟ ಪಂಗಡದ ಕ್ಷೇತ್ರದಿಂದ ಮಂಜುನಾಥ ಕಟಗಿ ಕಾಂಗ್ರೆಸ್ ಬೆಂಬಲಿತ ಐವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ವಿಜಯಾನಂದ ಕಾಶಪ್ಪನವರು ಮಾತನಾಡಿ, ಬಿಜೆಪಿ ನಾಲ್ವರನ್ನು ಸಿ ವರ್ಗದ ಸಂಘದಿಂದ ನಡೆಯುವ ಚುಣಾವಣೆಯಲ್ಲಿ ಅಭ್ಯರ್ಥಿಗಳನ್ನು ಅನಧಿಕೃತವಾಗಿ ಹಾಗೂ ಕಾನೂನು ಬಾಹಿರವಾಗಿ ನಿಲ್ಲಿಸಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡರೂ, ಚುನಾವಣೆ ನಡೆಯಿತು. ಟಿಎಪಿಸಿಎಂಎಸ್ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ತೆಕ್ಕೆಯಲ್ಲಿದ್ದು, ಮುಂದೆಯೂ ಕಾಂಗ್ರೆಸ್‌ ಹಿಡಿತದಲ್ಲಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು