ಇಳಕಲ್/ಬಾದಾಮಿ : ತಾಲ್ಲೂಕಿನ ವಿವಿಧೆಡೆ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ದೂರುಗಳು ಬಂದ ಹಿನ್ನಲೆಯಲ್ಲಿ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ಮಾಡಿ, ವಾಹನಗಳನ್ನು ಜಪ್ತಿ ಮಾಡಲಾಗಿದೆ.

ತಾಲ್ಲೂಕಿನ ಕರಡಿ, ಚಟ್ನಿಹಾಳ, ಕೆಸರಭಾವಿ ಹಾಗೂ ಪಾಲತಿ ಗ್ರಾಮಗಳ ಸುತ್ತಮುತ್ತ ಲೀಸ್ ಹೊಂದಿರುವ ಮರಳು ಗಣಿಗಾರಿಕೆ ಕೇಂದ್ರಗಳ ಮೇಲೆ ಲೋಕಾಯುಕ್ತ ಸಿಬ್ಬಂದಿ ದಾಳಿ ಮಾಡಿದ್ದಾರೆ ಎಂದು ಇಳಕಲ್ ತಹಶೀಲ್ದಾರ್ ಅಮರೇಶ ಪಮ್ಮಾರ ಮಾಹಿತಿ ನೀಡಿದರು.

ದಾಳಿ ಸಂದರ್ಭದಲ್ಲಿ ಸ್ಥಳದಲ್ಲಿದ್ದ 23 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪರವಾನಗಿ ಪಡೆದಲ್ಲಿ ಎಷ್ಟು ಮರಳು ತೆಗೆಯಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಅಕ್ರಮ ನಡೆದಿರುವುದು ಪತ್ತೆಯಾದರೆ, ಕ್ರಮಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿ ದಂಡೆಯಲ್ಲಿ ಅಕ್ರಮ ಮರಳಿ ಗಣಿಗಾರಿಕೆ ಪತ್ತೆಗಾಗಿ ಬುಧವಾರ ನದಿ ದಂಡೆಯ ವಿವಿಧ ಗ್ರಾಮಗಳ ಮರಳು ಗಣಿಗಾರಿಕೆಯ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಾಲ್ಲೂಕಿನ ಬೇಲೂರು, ಹೆಬ್ಬಳ್ಳಿ, ತಳಕವಾಡ, ಹಾಗನೂರು ಮತ್ತು ಬೀರನೂರ ಗ್ರಾಮಗಳ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ್ದು, ಎರಡು ಹಿಟಾಚಿ ಜಪ್ತಿ ಮಾಡಿದ್ದಾರೆ ಎಂದು ತಹಶೀಲ್ದಾರ್ ಎಸ್.ಎಫ್. ಬೊಮ್ಮನ್ನವರ ಹೇಳಿದರು.

ಬೇಲೂರ ಗ್ರಾಮದಲ್ಲಿ ಮರಳು ತುಂಬಿದ ಎರಡು ಟಿಪ್ಪರ್ಗಳ ತೂಕ ಪರಿಶೀಲಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವ ಆರೋಪದ ಮೇಲೆ ಕೆಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

ಹುನಗುಂದ: ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಲೋಕಾಯುಕ್ತರ ತಂಡ ಬುಧವಾರ ದಾಳಿ ಮಾಡಿದೆ.

ತಾಲ್ಲೂಕಿನ ಹಿರೇಮಾಗಿ, ಚಿಕ್ಕಮಳ ಗಾವಿ, ಹಡಗಲಿ, ಚಿತ್ತವಾಡಗಿ, ರಾಮವಾಡಗಿ ಸೇರಿದಂತೆ ವಿವಿಧ ಕಡೆ ಗಳಲ್ಲಿ ದಾಳಿ ಮಾಡಿ ಸ್ಥಳದಲ್ಲಿದ್ದ ಯಂತ್ರೋ ಪಕರಣ ಹಾಗೂ ಅಪಾರ ಪ್ರಮಾಣದ ಮರಳು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಳಿಗ್ಗೆಯೇ ವಾಹನಗಳಲ್ಲಿ ಬಂದ ಅಧಿಕಾರಿಗಳ ತಂಡವು ಮೊದಲೇ ನಿಗದಿಪಡಿಸಿಕೊಂಡಿದ್ದ ಅಕ್ರಮ ಮರಳು ಗಣಿಗಾರಿಕೆ ನಡೆಯುವ ಸ್ಥಳಿಗಳಿಗೆ ನುಗ್ಗಿತು.

ಅಲ್ಲಿದ್ದ ವಾಹನ ಜಪ್ತಿ ಮಾಡಲಾ ಯಿತು. ಸ್ಥಳೀಯ ಅಧಿಕಾರಿ ಗಳಿಗೆ ಮರಳು ಎಷ್ಟಿದೆ ಎಂಬುದನ್ನು ಪರಿಶೀಲಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತಿಳಿಸಿದ್ದಾರೆ.

ಲೋಕಾಪುರ: ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಅಕ್ರಮ ಮರಳು ಗಣಿಗಾರಿಕೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ.

ಜಂಬಗಿ ಕೆ.ಡಿ ಗ್ರಾಮದ ಘಟಪ್ರಭಾ ನದಿ ದಂಡೆಯ ತೀರದಲ್ಲಿ ಅಕ್ರಮವಾಗಿ ಮರಳು ತೆಗೆಯಲು ಬಳಸುತ್ತಿದ್ದ ಹಿಟ್ಯಾಚಿ, ಮರಳು ಹಾಗೂ ಎರಡು ಬೋಟ್ ಗಳನ್ನು ಜಪ್ತಿ ಮಾಡಲಾಗಿದೆ.

ಚಿಕ್ಕೂರ, ಕಸಬಾ ಜಂಬಗಿ, ಜಾಲಿಬೇರಿ ಗ್ರಾಮಗಳ ಹತ್ತಿರ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿದ್ದ ಮರಳು, ಹಿಟ್ಯಾಚಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-19-1680678717

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.