ಇಳಕಲ್: ಸಮೀಪದ ಬಲಕುಂದಿಯಲ್ಲಿನ 390 ಎಕರೆ ವಿಸ್ತಾರದ, ತಾಲ್ಲೂಕಿನ ಅತಿ ದೊಡ್ಡ ಕೆರೆಗೆ ಕೃಷ್ಣಾ ನದಿಯಿಂದ ನೀರನ್ನು ಪಂಪ್ ಮಾಡಿ ತುಂಬಿಸಲಾಗಿದೆ. ಆದರೆ, ಕಾಲುವೆಗಳೇ ಇಲ್ಲದ ಕಾರಣ ಒಂದು ಎಕರೆ ಪ್ರದೇಶಕ್ಕೂ ಇದರಿಂದ ಅನುಕೂಲವಾಗಿಲ್ಲ.

ಪ್ರತಿ ವರ್ಷ ಕೆರೆ ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತದೆ. ಆದರೂ, ಕೆರೆಯ ಏರಿ ಮೇಲೆ ಹಾಗೂ ಕೆರೆ ಅಂಗಳದಲ್ಲಿ ಮುಳ್ಳು ಕಂಟಿಗಳು ವ್ಯಾಪಕವಾಗಿ ಬೆಳೆದಿವೆ. ಮಾತ್ರವಲ್ಲದೆ, ಸಮೀಪದಲ್ಲಿ ನಡೆಯುವ ಗ್ರಾನೈಟ್ ಗಣಿಗಾರಿಕೆಯ ತ್ಯಾಜ್ಯವನ್ನು ಕೆರೆ ಅಂಗಳದಲ್ಲಿ ಸುರಿಯಲಾಗುತ್ತಿದೆ. ಪರಿಣಾಮ, ಯಾವ ಮಾರ್ಗದಿಂದಲೂ ಕೆರೆಯ ನೀರಾವರಿ ಉದ್ದೇಶಕ್ಕೆ ಬಳಕೆಯಗುತ್ತಿಲ್ಲ. ಇದು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷಕ್ಕೆ ಸ್ಪಷ್ಟ ಉದಾಹರಣೆ ಎಂಬುದು ಸ್ಥಳೀಯರ ಆರೋಪ.

1973ರಲ್ಲಿ ಕೆರೆ ಹಾಗೂ ಎರಡು ಕಾಲುವೆಗಳನ್ನು ನಿರ್ಮಿಸಲಾಗಿತ್ತು. ಎಡದಂಡೆಯ 8 ಕಿ.ಮೀ, ಬಲದಂಡೆಯ 3 ಕಿ.ಮೀ ಉದ್ದದ ಕಾಲುವೆಗಳನ್ನು ಈಗ ಹುಡುಕಿದರೂ ಸಿಗುವುದಿಲ್ಲ. ಸಂಪೂರ್ಣ ಹಾಳಾಗಿರುವ ಕಾಲುವೆಗಳ ದುರಸ್ತಿಗಾಗಿ ಹಣ ಖರ್ಚು ಮಾಡುವುದು ಮಾತ್ರ ಮುಂದುವರಿದಿದೆ’ ಎಂದು ರೈತರು ದೂರುತ್ತಾರೆ.

‘ಈ ಬಗ್ಗೆ ಲೋಕಾಯುಕ್ತ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಬಲಕುಂದಿ ಗ್ರಾಮದ ರೈತರು ದೂರು ನೀಡಿದ್ದಾರೆ. ಏಪ್ರಿಲ್ 27ರೊಳಗಾಗಿ ಕೆರೆಯ ಕಾಲುವೆ, ವಾಲ್ವ್ ದುರಸ್ತಿ ಮಾಡಿ, ರೈತರ ಹೊಲಗಳಿಗೆ ನೀರು ಹರಿಸುವಂತೆ ಲೋಕಾಯುಕ್ತರು ಗಡುವು ನೀಡಿದ್ದಾರೆ. ಆದರೂ, ಈವರೆಗೂ ಕಾಲುವೆ ದುರಸ್ತಿ ಕೆಲಸ ನಡೆದಿಲ್ಲ’ ಎಂದು ರೈತ ಮುಖಂಡ ಮಲ್ಲನಗೌಡ ತುಂಬದ ಆಕ್ರೋಶ ವ್ಯಕ್ತಪಡಿಸಿದರು.

‘ಕೆಲ ವರ್ಷಗಳ ಹಿಂದೆ ಕೆರೆಯಲ್ಲಿ ಅಕ್ರಮವಾಗಿ ಗ್ರಾನೈಟ್ ಗಣಿಗಾರಿಕೆ ನಡೆಯುತ್ತಿತ್ತು. ಆಗ ಕೆರೆಯಲ್ಲಿ ನೀರು ನಿಲ್ಲದಂತೆ ಮಾಡಲಾಗುತ್ತಿತ್ತು. ಈಗ ಗಣಿಗಾರಿಕೆ ನಡೆಯುತ್ತಿಲ್ಲ. ಕೃಷ್ಣೆಯ ನೀರು ಕೆರೆಯ ಒಡಲು ತುಂಬಿದೆ. ಕಣ್ಣೆದುರು ಇದ್ದರೂ ಬಳಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಹಲವಾರು ಎಕರೆಗೆ ನೀರುಣಿಸುವ ಸಾಮರ್ಥ್ಯವಿದ್ದರೂ, ಕೆರೆಯ ನೀರು ಪೋಲಾಗುತ್ತಿದೆ. ಸರ್ಕಾರ ಇತ್ತ ಗಮನ ಹರಿಸಿ, ಹೊಸ ಕಾಲುವೆಗಳನ್ನು ನಿರ್ಮಿಸಬೇಕು’ ಎಂದು ಆಗ್ರಹಿಸಿದರು.

‘₹280 ಕೋಟಿ ಯೋಜನೆ ವ್ಯರ್ಥ’

‘ಕೆರೆ ತುಂಬಿಸುವ ಯೋಜನೆಯಡಿ ₹280 ಕೋಟಿ ಖರ್ಚು ಮಾಡಿ ಬಲಕುಂದಿ ಕೆರೆಗೆ ಕೃಷ್ಣಾ ನದಿಯ ನೀರು ಹರಿಸಲಾಗಿದೆ. ಸದ್ಯ ಕೆರೆಯಲ್ಲಿ ನೀರು ತುಂಬಿದೆ. ಆದರೆ ಹೊಲಕ್ಕೆ ನೀರು ಹರಿಸಲು ಕಾಲುವೆ ಹಾಗೂ ಗೇಟ್ಗಳೇ ಇಲ್ಲ. ನದಿಯಿಂದ ಪಂಪ್ ಮಾಡಿದ ನೀರು ಪೋಲಾಗುತ್ತಿದೆ’ ಎಂದು ಮಲ್ಲನಗೌಡ ತುಂಬದ ಹೇಳಿದರು.

‘ಕೆರೆಯ ಮಧ್ಯ ಬೋರ್ವೆಲ್ ಕೊರೆದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅಚ್ಚುಕಟ್ಟು ಪ್ರದೇಶದಲ್ಲಿ ಜಮೀನು ಇಲ್ಲದವರು ರೈತರೇ ಅಲ್ಲದವರು ಕೆರೆ ಬಳಕೆದಾರರ ಸಂಘದ ಪದಾಧಿಕಾರಿ ಆಗಿದ್ದಾರೆ. ಕೆರೆ ಸಂರಕ್ಷಣೆಗಾಗಿ 20 ವರ್ಷದಿಂದ ಹೋರಾಡುತ್ತಿದ್ದೇನೆ’ ಎಂದರು.

ಜನಪ್ರತಿನಿಧಿಗಳು ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕಾನೂನು ಹೋರಾಟದ ಮೂಲಕ ರೈತರಿಗೆ ನ್ಯಾಯ ಕೊಡಿಸಲು ಶ್ರಮಿಸಲಾಗುವುದು.
ಮಲ್ಲನಗೌಡ ತುಂಬದ, ರೈತ ಮುಖಂಡ

ಕಾಲುವೆಗಳು ಹಾಳಾಗಿ 20 ವರ್ಷ ಕಳೆದಿದೆ. ಕೆಲವೆಡೆ ಒತ್ತುವರಿಯೂ ಆಗಿವೆ. ಕಾಲುವೆ ಪುನರ್ ನಿರ್ಮಾಣಕ್ಕಾಗಿ ವರ್ಷದ ಹಿಂದೆ ಸರ್ಕಾರಕ್ಕೆ 6 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿದೆ.
ಪ್ರಕಾಶ ನಾಯಕ, ಎಇಇ, ಸಣ್ಣ ನೀರಾವರಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.