ಇಳಕಲ್: ಇಳಕಲ್ ಹಾಗೂ ಹುನಗುಂದ ತಾಲ್ಲೂಕುಗಳ ಗೊಬ್ಬರ, ಬೀಜ ಮತ್ತು ಕ್ರಿಮಿನಾಶಕ ಮಾರಾಟಗಾರರು ವ್ಯಾಪಾರದಲ್ಲಿ ಎದುರಿಸುತ್ತಿರುವ ಹಲವು ತೊಂದರೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅಂಗಡಿಗಳನ್ನು ಬಂದ್ ಮಾಡಿ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಮನವಿ ಸಲ್ಲಿಸಿದರು.

ಇಳಕಲ್ ಹಾಗೂ ಹುನಗುಂದ ತಾಲ್ಲೂಕುಗಳ ಗೊಬ್ಬರ, ಬೀಜ, ಕ್ರಿಮಿನಾಶಕ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಮಠದ ಮಾತನಾಡಿ, ‘ಗೊಬ್ಬರ, ಬೀಜ ಹಾಗೂ ಕ್ರಿಮಿನಾಶಕ ಮಾರಾಟದ ಸಂದರ್ಭದಲ್ಲಿ ಅನೇಕ ತೊಂದರೆ ಎದುರಿಸುತ್ತಿದ್ದೇವೆ. ಗೊಬ್ಬರ ಮಾರಾಟ ಮಾಡಲು ಸರ್ಕಾರ, ಕಂಪನಿಗಳು ವಿಧಿಸಿರುವ ಷರತ್ತು ರೈತ ವಿರೋಧಿಯಾಗಿದೆ. ಗೊಬ್ಬರದ ಜೊತೆ ಬೇರೆ ಉತ್ಪನ್ನಗಳನ್ನು ರೈತರಿಗೆ ಮಾರಾಟ ಮಾಡಲು ಕಂಪನಿಗಳು ಒತ್ತಾಯಿಸುತ್ತಿವೆ. ಎಫ್.ಐ.ಡಿ ಪಡೆದು ಗೊಬ್ಬರ ವಿತರಿಸಬೇಕು ಎನ್ನುವ ನಿಯಮದಿಂದ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಸಿಗುತ್ತಿಲ್ಲ. ಇದರಿಂದ ದೇಶದ ಕೃಷಿ ಉತ್ಪಾದನೆ ಕಡಿಮೆಯಾಗುತ್ತದೆ’ ಎಂದರು.

‘ರೈತರ ಬೇಡಿಕೆಗೆ ಅನುಗುಣವಾಗಿ ಡಿಎಪಿ ಹಾಗೂ ಯೂರಿಯಾ ವಿತರಿಸಬೇಕು. ಕೃಷಿ ಅಧಿಕಾರಿಗಳು ತಪಾಸಣೆ ನೆಪದಲ್ಲಿ ನೀಡುತ್ತಿರುವ ತೊಂದರೆ ತಪ್ಪಿಸಬೇಕು. ಮುಂಗಾರು ಹಂಗಾಮಿನ ಬಿತ್ತನೆಗೆ ತೊಂದರೆ ಆಗದಂತೆ ಸರ್ಕಾರ ಗೊಬ್ಬರ ಪೂರೈಸಬೇಕು’ ಎಂದು ಮನವಿ ಮಾಡಿದರು.

ಇಳಕಲ್ ಮತ್ತು ಹುನಗುಂದ ತಾಲ್ಲೂಕುಗಳ ತಹಶೀಲ್ದಾರ್, ಸಹಾಯಕ ಕೃಷಿ ನಿರ್ದೇಶಕರಿಗೂ ಮನವಿ ಸಲ್ಲಿಸಿದರು.

ಸಂಘದ ಉಪಾಧ್ಯಕ್ಷ ಅಂದಾನಪ್ಪ ಹವಾಲ್ದಾರ್, ಕಾರ್ಯದರ್ಶಿ ಮಹೇಶ ಪಾಟೀಲ, ಕೋಶಾಧ್ಯಕ್ಷ ಪ್ರಭು ಇದ್ದಲಗಿ, ಅಶೋಕ ಪಟ್ಟಣಶೆಟ್ಟಿ, ಜಗದೀಶ ಬಳ್ಳೊಳ್ಳಿ, ಮುತ್ತಣ್ಣ ತೆಗ್ಗಿ, ಶಿವಣ್ಣ ತೋಟಗೇರ, ಬಸವರಾಜ ಸಜ್ಜನ, ಶರಣಪ್ಪ ಹೊದ್ನೂರ, ಮಲ್ಲನಗೌಡ ಗೌಡರ, ಮಹಾಂತೇಶ ನಾಗರಾಳ, ಬಸವರಾಜ ರೋಣದ, ಆನಂದ ಜಾಲಿಹಾಳ, ಶರಣು ಮನ್ನಿ, ಅಪ್ಪು ಕನ್ನೂರ, ಶೇಖಣ್ಣ ಯಂಡಿಗೇರಿ, ಮುತ್ತಣ್ಣ ಬೆಳ್ಳಿ, ಪ್ರಕಾಶ ಸೋಮಣ್ಣವರ, ಮಹಾಂತಯ್ಯ ವಸ್ತ್ರದ, ಪ್ರಕಾಶಗೌಡ ಪಾಟೀಲ, ಶರಣಪ್ಪ ನ್ಯಾಯನೇಗಲಿ, ಸಂದೀಪ ಅಂಗಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-19-1278609508

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.