ಇಳಕಲ್: ಸಮೀಪದ ಗೊರಬಾಳ ಗ್ರಾಮದ ಜೈ ವಿಜಯ ಯುವಕ ಸಂಘದ ಯುವಕರು ಇಳಕಲ್ ಜಿಲ್ಲಾ ಮುಖ್ಯ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಗೊರಬಾಳ ಗ್ರಾಮದ ಹೊರವಲಯದ ವರೆಗೆ ಬಿದ್ದಿದ್ದ ಗುಂಡಿಗಳನ್ನು ಸ್ವಂತ ಖರ್ಚು ಹಾಗೂ ಶ್ರಮದಾನದ ಮೂಲಕ ಮುಚ್ಚಿದ ಘಟನೆ ಶುಕ್ರವಾರ ನಡೆದಿದೆ.

ಸಾಕಷ್ಟು ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ಸಂಚರಿಸುವಾಗ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದರು. ಈ ಬಗ್ಗೆ ವರ್ಷದಿಂದ ಗ್ರಾಮಸ್ಥರು ಲೋಕೋಪಯೋಗಿ ಎಇಇ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಅವರ ಗಮನಕ್ಕೆ ತಂದರೂ ಪ್ರಯೋಜನ ಆಗಿರಲಿಲ್ಲ.

ಇಳಕಲ್ ಮೂಲಕ ರಾಜ್ಯ ಹೆದ್ದಾರಿ 20 (ಬೆಳಗಾವಿ-ರಾಯಚೂರು) ಸಂಪರ್ಕಿಸುವ ಈ ಜಿಲ್ಲಾ ಮುಖ್ಯ ರಸ್ತೆಯು ಸಂಪೂರ್ಣ ಹಾಳಾಗಿದೆ. ರಸ್ತೆ ಪಕ್ಕದಲ್ಲಿ, ಮಧ್ಯದಲ್ಲಿ ಪೈಪ್ಲೈನ್ ದುರಸ್ತಿಗಾಗಿ ಎಲ್ಲೆಂದರಲ್ಲಿ ತೋಡಿದ ಗುಂಡಿಗಳು ಮೂರು ತಿಂಗಳಿಂದ ಮುಚ್ಚದೇ ಹಾಗೆ ಬಿಟ್ಟಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಗಮನ ಸೆಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ.

ಹಾಳಾಗಿರುವ ರಸ್ತೆಯ ತಾತ್ಕಾಲಿಕ ದುರಸ್ತಿಗೆ ಮುಂದಾದ ಗೊರಬಾಳ ಗ್ರಾಮದ ವಿಜಯ ಪೂಜಾರಿ ನೇತೃತ್ವದ ಯುವಕರ ಗುಂಪು ನಾಲ್ಕಾರು ಟ್ರ್ಯಾಕ್ಟರ್ ಗರಸು ತಂದು, ಶ್ರಮದಾನದ ಮೂಲಕ ಗುಂಡಿಗಳನ್ನು ಮುಚ್ಚಿದರು. ಗ್ರಾಮದ ಹಿರಿಯರು ಯುವಕರ ಸಮಾಜ ಉಪಯೋಗಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-19-719311172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.