ಇಳಕಲ್: ನಗರದ ಇಬ್ಬರು ಬಾಲಕರು ಹನಮನಾಳ ಎಸ್.ಟಿ. ಗ್ರಾಮ ಹತ್ತಿರದ ಗ್ರಾನೈಟ್ ಕ್ವಾರಿಯಲ್ಲಿ ಸಂಗ್ರಹಗೊಂಡಿದ್ದ ನೀರಿನಲ್ಲಿ ಮಂಗಳವಾರ ಈಜಲು ಹೋಗಿ ಮೃತಪಟ್ಟಿದ್ದಾರೆ.

ಅಲಂಪುರಪೇಟೆ ನಿವಾಸಿ ವಿಜಯಮಹಾಂತೇಶ ನಾಗರಾಜ ವಾಲೀಕಾರ (16), ಹಾದಿ ಬಸವಣ್ಣ ಆಸರೆ ಬಡಾವಣೆಯ ವಿನಾಯಕ ಭೀಮಪ್ಪ ಗೊಲ್ಲಾರ (14) ಮೃತರು. ವಿನಾಯಕ ನಗರದ ಕೆಬಿಎಂಪಿಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿ, ಮೃತದೇಹಗಳನ್ನು ಹೊರತೆಗೆದರು. ಸ್ಥಳದಲ್ಲಿದ್ದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು.ಈ ಕುರಿತು ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಾಲ್ಲೂಕಿನ ಹನಮನಾಳ ಎಸ್.ಟಿ., ಗುಡೂರ ಎಸ್.ಟಿ., ಹಿರೇಕೊಡಗಲಿ, ಬಲಕುಂದಿ, ಚಿಕ್ಕಕೊಡಗಲಿ ಸುತ್ತಲಿನ ಪ್ರದೇಶದಲ್ಲಿ ಗ್ರಾನೈಟ್ ಕ್ವಾರಿಗಳಿದ್ದು, ಇವುಗಳಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಈ ಹಿಂದೆಯು ಈಜಲು ಹಾಗೂ ಬಟ್ಟೆ ತೊಳೆಯಲು ಹೋದವರು ಮೃತಪಟ್ಟ ಘಟನೆಗಳು ನಡೆದಿವೆ. ಆಳವಾದ ಕ್ವಾರಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-19-1197176815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.