ಇಳಕಲ್: ಲಿಂಗೈಕ್ಯ ಮಹಾಂತ ಸ್ವಾಮೀಜಿ 8ನೇ ಪುಣ್ಯಸ್ಮರಣೆ ನಿಮಿತ್ತ ಮೇ 16ರಿಂದ 19ರ ವರೆಗೆ ಮಹಾಂತ ಜೋಳಿಗೆ ಹಾಗೂ ಲಿಂಗಯೋಗದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ' ಎಂದು ಗುರುಮಹಾಂತ ಸ್ವಾಮೀಜಿ ಹೇಳಿದರು.

ನಗರದ ಮಠದ ದಾಸೋಹ ಭವನದಲ್ಲಿ ಭಕ್ತರ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಮಹಾಂತ ಶ್ರೀಗಳು ವ್ಯಸನಮುಕ್ತ ಸಮಾಜಕ್ಕಾಗಿ ಮಹಾಂತ ಜೋಳಿಗೆ ಹುಟ್ಟು ಹಾಕಿ, ಲಕ್ಷಾಂತರ ಜನರ ವ್ಯಸನ ದೂರ ಮಾಡಿದ್ದರು. ಬಸವ ತತ್ವ ಪ್ರಸಾರ, ಮೌಢ್ಯ ದೂರ ಮಾಡಲು ಸಾಕಷ್ಟು ಕೆಲಸ ಮಾಡಿದ್ದರು. ಈ ಹಿಂದೆ ಸ್ವಾಮೀಜಿ ಆರಂಭಿಸಿದ್ಧ ಶರಣ ಸಿದ್ದಾಂತ ವಿದ್ಯಾಪೀಠದಡಿ ಪ್ರತಿವರ್ಷ ಶ್ರೀಗಳ 3 ದಿನ ಸ್ಮರಣೋತ್ಸವ ನಡೆಸಲಾಗುತ್ತದೆ' ಎಂದರು.

ಮೇ 16 ರಂದು ಶಿಬಿರದ ಉದ್ಘಾಟನೆ, ಮೇ 17 ಹಾಗೂ 18 ರಂದು ಬೆಳಗಿನ ಜಾವ 6 ಗಂಟೆಯಿಂದ 7 ಗಂಟೆಯವರೆಗೆ ನಗರದಲ್ಲಿ ಜನಜಾಗೃತಿ ಪಾದಯಾತ್ರೆ, ಬೆಳಿಗ್ಗೆ 7.30 ರಿಂದ 9 ಗಂಟೆಯವರೆಗೆ 3 ದಿನಗಳ ಕಾಲ ನಿತ್ಯ ಇಷ್ಟಲಿಂಗ ಯೋಗ ಹಾಗೂ ಇಷ್ಟಲಿಂಗದ ವೈಜ್ಞಾನಿಕತೆ ಕುರಿತ ಪ್ರಾತ್ಯಕ್ಷಿಕೆ ನಡೆಯಲಿದೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ 3 ಉಪನ್ಯಾಸ, ಸಂಜೆ 6 ಗಂಟೆಗೆ ಬಸವ ತತ್ವದ ಮೇಲೆ ಬಹಿರಂಗ ಚರ್ಚೆ, ಸಂವಾದ ನಡೆಯಲಿದೆ. ಮೇ.19 ರಂದು ಪೂಜ್ಯರ ಸ್ಮರಣೆ ಹಾಗೂ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಲಿಂಗಾಯತ ಧರ್ಮದ ತತ್ವಗಳ ಬಗ್ಗೆ ಅರಿವು ಮೂಡಿಸುವ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಳ್ಳಲು ಎಂದು ಮನವಿ ಮಾಡಿದರು.

ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಚೇರಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಿ. ಪಾಟೀಲ, ಲಕ್ಷ್ಮಣ ಗುರಂ, ಎಂ.ವಿ. ಪಾಟೀಲ, ಕಿರಣ ಬಿಜ್ಜಲ್, ಗುರಣ್ಣ ಮರಟದ, ಎಸ್.ವಿ. ಪಾಟೀಲ, ಡಾ.ಅರುಣಾ ಅಕ್ಕಿ, ಸಿ.ಸಿ.ಚಂದ್ರಾಪಟ್ಟಣ, ಎಲ್.ಬಿ. ಅರಸಿದ್ದಿ, ವಿಶ್ವನಾಥ ಪಾಟೀಲ ಸಲಹೆ ಸೂಚನೆ ನೀಡಿದರು. ಸಂಗಣ್ಣ ಗದ್ದಿ ನಿರೂಪಿಸಿದರು. ಶಾಂತಣ್ಣ ಸರಗಣಾಚಾರಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-19-2080235869

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.