ಇಳಕಲ್: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಡಯಾಲಿಸಿಸ್ ಸೇವೆಯ ಘಟಕವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.

ಅವರು ಈ ಸಂದರ್ಭದಲ್ಲಿ ಮಾತನಾಡಿ, ‘8 ತಿಂಗಳ ಹಿಂದೆ ಹುನಗುಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಿದೆ. ಆಗಲೇ ಇಳಕಲ್ ನಗರದಲ್ಲೂ ಡಯಾಲಿಸಿಸ್ ಸೇವೆಯ ಅಗತ್ಯವನ್ನು ಮನವರಿಕೆ ಮಾಡಿದ್ದರು. ಆರೋಗ್ಯ ಸಚಿವರೊಂದಿಗೆ ಚರ್ಚಿಸಿ, ಇಳಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ ಪ್ರಾರಂಭವಾಗಿದೆ. ಉಚಿತವಾಗಿರುವ ಈ ಸೇವೆಯು ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದೆ' ಎಂದರು.

‘ಡಯಾಲಿಸಿಸ್ ಕೇಂದ್ರದಲ್ಲಿ ಪ್ರತಿದಿನ ಬೆಳಿಗ್ಗೆ 7.30 ರಿಂದ 11.30, ಮಧ್ಯಾಹ್ನ 12.30 ರಿಂದ 04.30ಕ್ಕೆ ಹಾಗೂ ಸಂಜೆ 5.30 ರಿಂದ 9.30ರವರೆಗೆ ಒಟ್ಟು ಮೂರು ಶೀಫ್ಟ್ಗಳಲ್ಲಿ ಸೇವೆ ಇರಲಿದೆ. ಡಯಾಲಿಸಿಸ್ ಉಚಿತವಾಗಿದೆ. ಸಂಬಂಧಿಸಿದ ಕಿಟ್ ಅನ್ನು ಕೂಡ ನೀಡಲಾಗುವುದು’ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಪರವಾಗಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಸನ್ಮಾನಿಸಿದರು. ಮುಖಂಡರಾದ ವೆಂಕಟೇಶ ಸಾಕಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಚಿಂಚಮಿ, ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಹನಮನಾಳ, ವೈದ್ಯ ಡಾ.ಮಹಾಂತೇಶ ಅಕ್ಕಿ, ವಿಠ್ಠಲ ಜಕ್ಕಾ, ಟಿಪ್ಪು ಭಂಡಾರಿ, ಅಹ್ಮದಸಾಬ ಬಾಗವಾನ, ಎಸ್.ಜಿ. ರಾಮಗಿರಿಮಠ, ಮಂಜುನಾಥ ಸಪ್ಪರದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.