ಇಳಕಲ್: ‘ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಹಾಡು, ನೃತ್ಯ, ನಾಟಕ ಕಲಿಕೆಗೆ ಅವಕಾಶ ಸಿಕ್ಕಿದೆ. ಇದರಿಂದ ಮಕ್ಕಳಲ್ಲಿ ಸೃಜನಶೀಲತೆ ಬೆಳೆಯುತ್ತದೆ ಹಾಗೂ ವ್ಯಕ್ತಿತ್ವ ವಿಕಸನವಾಗುತ್ತದೆ’ ಎಂದು ಕಾಂಗ್ರೆಸ್ ಮುಖಂಡ ವಿಜಯಮಹಾಂತೇಶ ಗದ್ದನಕೇರಿ ಹೇಳಿದರು.

ಇಲ್ಲಿಯ ಸುವರ್ಣ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಿರಿಜನ ಉಪಯೋಜನೆ ಕಾರ್ಯಕ್ರಮದಡಿ ನಾಟ್ಯರಾಣಿ ಕಲಾ ಸಂಘ ಮಕ್ಕಳಿಗಾಗಿ ಆಯೋಜಿಸಿದ್ದ ‘ಚಿಣ್ಣರ ಚಿಲಿಪಿಲಿ’ ಉಚಿತ ಬೇಸಿಗೆ ಶಿಬಿರದಲ್ಲಿ ಸಾಂಸ್ಕೃತಿಕ ಸಂಭ್ರಮಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಇಳಕಲ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಸಂಗಣ್ಣ ಗದ್ದಿ ಮಾತನಾಡಿ, ‘ಕಲಾವಿದರ ನಾಡು ಎಂದು ಹೆಸರಾಗಿದ್ದ ಇಳಕಲ್ನಲ್ಲಿ ನಾಟಕ ಕಲೆ ಮರೆಯಾಗುತ್ತಿದೆ. ಅದಕ್ಕಾಗಿ ಕೆಲವು ಹಿರಿಯ ಕಲಾವಿದರು ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಚಿಣ್ಣರ ಚಿಲಿಪಿಲಿ ಶಿಬಿರದ ಮೂಲಕ ತರಬೇತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕಲಾಸಕ್ತಿ ಬೆಳೆದು ಉತ್ತಮ ಕಲಾವಿದರು ರೂಪಗೊಳ್ಳಲಿ’ ಎಂದು ಆಶಿಸಿದರು.

ಸ್ನೇಹ ರಂಗದ ಅಧ್ಯಕ್ಷ ಬಸವರಾಜ ಮಠದ, ಪತ್ರಕರ್ತರಾದ ಮಹಾಂತೇಶ ಗೊರಜನಾಳ ಮತ್ತು ಸುಲೇಮಾನ್ ಚೋಪದಾರ ಅತಿಥಿಗಳಾಗಿ ಭಾಗವಹಿಸಿದ್ದರು.

ಶಿಬಿರದಲ್ಲಿ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಮತ್ತು ಕಲಾವಿದೆ ಉಮಾರಾಣಿ ಬಾರಿಗಿಡದ ಅವರ ಮಾರ್ಗದರ್ಶನದಲ್ಲಿ ಶಿಬಿರಾರ್ಥಿಗಳು ಪ್ರದರ್ಶಿಸಿದ ನಾಟಕ, ರೂಪಕ, ಇನ್ನಿತರ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮೆಚ್ಚುಗೆ ಗಳಿಸಿದವು.

ಕಲಾವಿದರಾದ ಸಂತೋಷ ಚಿತ್ರಗಾರ, ಮಹಾಂತೇಶ, ಕವಿತಾ ಮತ್ತು ಬಸಯ್ಯ ಜವಳಗೇರಿ ಅವರನ್ನು ಸತ್ಕರಿಸಲಾಯಿತು. ಜ್ಯೋತಿ ಚಲವಾದಿ ಮತ್ತು ಕಸ್ತೂರಿ ಮೆಹರ್ ವಾಡೆ ಪ್ರಾರ್ಥಿಸಿದರು. ನಾಟ್ಯರಾಣಿ ಕಲಾ ಸಂಘದ ಅಧ್ಯಕ್ಷೆ ಉಮರಾಣಿ ಬಾರಿಗಿಡದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ಧೂಪದ ಕಾರ್ಯಕ್ರಮ ನಿರೂಪಿಸಿದರು. ಉಮೇಶ ಟೆಂಕಸಾಲಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-19-648856201

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.