ಇಳಕಲ್: ‘ನಗರದ 3ನೇ ವಾರ್ಡ್ಗೆ 20 ದಿನಗಳಿಂದ ನೀರು ಬಿಟ್ಟಿಲ್ಲ. 2 ದಿನಗಳಲ್ಲಿ ನೀರು ಪೂರೈಸದಿದ್ದರೆ ನಗರಸಭೆ ಎದುರು ಧರಣಿ ಮಾಡುತ್ತೇವೆ’ ಎಂದು ಬಿಜೆಪಿ ಮುಖಂಡ ವೆಂಕಟೇಶ ಪೋತಾ ಎಚ್ಚರಿಸಿದರು.

ಅವರು ಮಂಗಳವಾರ ನಗರಸಭೆ ಎದುರು ನೀರು ಪೂರೈಸುವಂತೆ ಮಹಿಳೆಯರು ಸೇರಿದಂತೆ ನೂರಾರು ನಾಗರಿಕರು ಮಾಡುತ್ತಿದ್ದ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ಶಾಸಕರು ತಮಗೆ 3 ಮತ್ತು 4ನೇ ವಾರ್ಡ್ನಲ್ಲಿ ವೋಟ್ ಬರುವುದಿಲ್ಲ ಎಂಬ ಕಾರಣಕ್ಕೆ ನೀರು ಕೊಡುತ್ತಿಲ್ಲ. ಜೂನಿಯರ್ ಕಾಲೇಜಿನ ಹತ್ತಿರ ಹಿಂದೆ ನಮ್ಮ ಸರ್ಕಾರ ಮಂಜೂರು ಮಾಡಿದ್ದ ಓವರ್ ಹೆಡ್ ಟ್ಯಾಂಕ್ ನಿರ್ಮಾಣವನ್ನು ಸ್ಥಗಿತಗೊಳಿಸಿ ದ್ವೇಷ ಸಾಧಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಾವು ಯಾವುದೇ ಬೆದರಿಕೆ, ಒತ್ತಡಕ್ಕೆ ಹೆದರಲ್ಲ. ಬಗ್ಗಲ್ಲ. ಸರಿಯಾಗಿ ನೀರು ಪೂರೈಸದಿದ್ದರೇ ನಗರದ ಎಲ್ಲ ಭಾಗದ ಜನರನ್ನು ಸೇರಿಸಿ ನಗರಸಭೆ ಮುಂದೆ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದರು.

‘ನಮಗೆ ತಿಂಗಳಿಂದ ನೀರಿಲ್ಲ. ನಿದ್ದೆ ಇಲ್ಲ. ಕೆಲಸವೂ ಇಲ್ಲ. ನಮಗೆ ಸಾಕಾಗಿದೆ. ನೀರಿಗಾಗಿ ಇನ್ನೊಂದು ದಿನ ಕಾಯ್ತೀವಿ. ಬರದಿದ್ದರೇ ನಗರಸಭೆ ಎದುರು ಕುಳಿತು ತೀವ್ರ ಹೋರಾಟ ಮಾಡುತ್ತೇವೆ’ ಎಂದು ಮಹಿಳೆಯೊಬ್ಬಳು ಹೇಳಿದರು.

ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿ, ನಗರಸಭೆ ಸಿಬ್ಬಂದಿ ವಿರುದ್ಧ ಹರಿಹಾಯ್ದರು. ನೀರು ಸರಬರಾಜು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನಾಳೆಯೊಳಗೆ ನೀರು ಪೂರೈಸುವುದಾಗಿ ಭರವಸೆ ನೀಡಿದರು. ಹಿಂದೂ ಸೇವಾ ಟ್ರಸ್ಟ್ನ ಮುಖಂಡ ಪರಶುರಾಮ ಬಿಸಲದಿನ್ನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-19-840018027

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.