ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪತ್ರಿಕೆಗಳಿಂದ ಸಮಾಜದ ಚಿತ್ರಣ ಬದಲು‘

ಪತ್ರಿಕಾ ದಿನಾಚರಣೆ, ಸನ್ಮಾನ ಸಮಾರಂಭ
Published : 30 ಜುಲೈ 2023, 14:58 IST
Last Updated : 30 ಜುಲೈ 2023, 14:58 IST
ಫಾಲೋ ಮಾಡಿ
Comments

ಹುನಗುಂದ: ‘ಪತ್ರಿಕೆಗಳು ಸಮಾಜವನ್ನು ಎಚ್ಚರಿಸುವ ಕೈ ದಿವೀಗೆಗಳು’ ಎಂದು ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸಿದ್ಧಲಿಂಗಪ್ಪ ಬೀಳಗಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಭವನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಅಧಿಕಾರ ಹಸ್ತಾಂತರ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪತ್ರಿಕೆಯ ವರದಿಗಳಿಗೆ ಇಡೀ ಸಮಾಜದ ಚಿತ್ರಣ ಬದಲಾಯಿಸುವ ಶಕ್ತಿ ಇದೆ. ಇಂದಿನ ತಾಂತ್ರಿಕ ಯುಗದಲ್ಲಿ ಕ್ಷಣದಲ್ಲಿಯೇ ವಿಶ್ವದ ಮಾಹಿತಿ ತಿಳಿಯಬಹುದು ಆದರೆ ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಖುಷಿಗೆ ಬೇರೆ ಸಾಟಿ ಇಲ್ಲ’ ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಅಂಗಡಿ ಮಾತನಾಡಿ, ‘ಸ್ಥಳೀಯ ಆರೋಗ್ಯ ಸಮಸ್ಯೆಗಳ ಕುರಿತು ಇಲಾಖೆ ಗಮನ ಸೆಳೆಯುವ ಕಾರ್ಯಮಾಡಿ. ಮಳೆ, ಗಾಳಿ, ಚಳಿಗೆ ಅಂಜದೆ ಸಮಯಕ್ಕೆ ಸರಿಯಾಗಿ ಪ್ರತಿ ಮನೆಗಳಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ನಾಗರಾಜ ಮುದಗಲ್ಲ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳನ್ನು ಖರೀದಿಸಿ ಓದುವ ಆಸಕ್ತಿ ಕಡಿಮೆಯಾಗಿದೆ’ ಎಂದರು.

ಸಂಘದ ವತಿಯಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಲಾಯಿತು. ನಂತರ ಆರೋಗ್ಯ ಸಿಬ್ಬಂದಿ ಸಂಗಮೇಶ ಬನ್ನಹಟ್ಟಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹೂಗಾರ ಸಂಘದ ನೂತನ ಅಧ್ಯಕ್ಷ ಮಹಾಂತೇಶ ಪಾಟೀಲ ಅವರಿಗೆ ಪುಸ್ತಕ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಮಲ್ಲಿಕಾರ್ಜುನ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಬ್ಬಾರ ಕಲ್ಬುರ್ಗಿ, ರಿಯಾಜ್ ಸರ್ಕಾವಸ್ ಇತರರಿದ್ದರು. , ಶರಣಪ್ಪ ಹೂಲಗೇರಿ ನಿರೂಪಿಸಿದರು. ಬಸವರಾಜ ಕಮ್ಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT