ತೇರದಾಳ: ಆಧುನಿಕ ಯುಗದಲ್ಲಿ ಮಹಿಳೆಯರು ಇಲ್ಲದಿರುವ ಕ್ಷೇತ್ರವೆ ಇಲ್ಲವೆನ್ನುವಷ್ಟರ ಮಟ್ಟಿಗೆ ಮಹಿಳೆ ಸಾಧಕಿಯಾಗಿದ್ದಾಳೆ. ಕುಟುಂಬಕ್ಕಾಗಿ ಮನೆಯ ಒಳಗೂ, ಹೊರಗು ದುಡಿದರೂ ಕೂಡ ಅವಳ ಕುರಿತಾಗಿ ಕೀಳರಿಮೆ ಮಾತ್ರ ಕಡಿಮೆಯಾಗಿಲ್ಲ ಎಂದು ಜಮಖಂಡಿಯ ಸಮಾಜ ಸೇವಕಿ ಭಾಗ್ಯಶ್ರೀ ಸಂಗಮೇಶ ಕೋಟಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದ ಆಶ್ರಯದಲ್ಲಿ ಪೇಟೆ ಭಾಗದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿರುವ ಮಕ್ಕಳು ಪಾಲಕರನ್ನು ಅದರಲ್ಲೂ ತಾಯಿಯನ್ನು ಹೆಚ್ಚು ಅನುಕರಣೆ ಮಾಡುವುದರಿಂದ ಅವರಿಗೆ ಸಂಸ್ಕಾರ ಕಲಿಸುವುದರೊಂದಿಗೆ ತಾಯಿಯಾದವಳು ಮಹತ್ವದ ಪಾತ್ರ ನಿರ್ವಹಿಸಬೇಕಿದೆ. ಹೆಣ್ಣು ಸಂಸಾರದ ಕಣ್ಣು ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಲೀಲಾ ಮಂಗಸೂಳಿ, ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ ಎಂಬಂತೆ, ವೈಯಕ್ತಿಕವಾಗಿಯೂ ಮಹಿಳೆ ಸಬಲೆಯಾಗಬೇಕು ಹಾಗೂ ಸಂಘಟನೆ ಮೂಲಕ ಸಾಮಾಜಿಕವಾಗಿ ಬೆಳೆಯುವ ಅವಶ್ಯಕತೆಯಿದೆ ಎಂದರು.

ಮಹಿಳಾ ಘಟಕ ಅಧ್ಯಕ್ಷೆ ಸುನೀತಾ ಹಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಅಧ್ಯಕ್ಷೆ ಕಮಲಕ್ಕ ವಾಲಿ, ಉಪಾಧ್ಯಕ್ಷೆ ಸ್ಮೀತಾ ಅವರಾದಿ, ಪದಾಧಿಕಾರಿಗಳಾದ ಶೈಲಜಾ ಸೊಟ್ಟಿ, ಸವಿತಾ ಮುಚ್ಚಂಡಿ, ಕಲಾವತಿ ಪಟ್ಟಣಶೆಟ್ಟಿ, ಶಮರ್ಿಳಾ ಅವರಾದಿ, ಶೃತಿ ಯಾದವಾಡ, ರೂಪಾ ಪಟ್ಟಣಶೆಟ್ಟಿ, ದೀಪಾ ಮಹಾಬಳಶೆಟ್ಟಿ, ರಾಣಿ ಹಂಜಿ, ಶ್ರೀನಿಧಿ ಪಟ್ಟಣಶೆಟ್ಟಿ, ವಿಜಯಾ ಯಾದವಾಡ, ರೂಪಾ ಮುಚ್ಚಂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.