ಜಮಖಂಡಿ: ರಾಜ್ಕುಮಾರ್ ಸಮಾಧಿ ಸ್ಥಳದ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿರುವ ನಟ ಅಹಿಂಸಾ ಚೇತನ್ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರತ್ನ ರಾಜಕುಮಾರ ಕನ್ನಡ ಬಳಗದ ಪದಾಧಿಕಾರಿಗಳು ತಾಲ್ಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ತಹಶೀಲ್ದಾರ್ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರತ್ನ ರಾಜಕುಮಾರ ಕನ್ನಡ ಬಳಗದ ಅಧ್ಯಕ್ಷ ನಾರಾಯಣ ಕಲಬುರ್ಗಿ ಮಾತನಾಡಿ, ನಟ ಅಹಿಂಸಾ ಚೇತನ ಅವರು ರಾಜಕುಮಾರ್ ಅವರು ನಾಡಿಗೆ ನೀಡಿರುವ ಕೊಡುಗೆಗಳ ಬಗ್ಗೆ ಮೊದಲು ಅಧ್ಯಯನ ಮಾಡುವ ಮೂಲಕ ಅರಿತುಕೊಳ್ಳಬೇಕು. ಯಾರ ಬಗ್ಗೆ ಯಾವ ಸ್ಥಳದ ಬಗ್ಗೆ ಮಾತನಾಡುತ್ತಿರುವೆ ಎಂಬ ಪರಿಜ್ಞಾನ ಇಲ್ಲದೇ ಈ ರೀತಿ ಹೇಳಿಕೆ ನೀಡಿ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಕೂಡಲೇ ಅವರ ಮೇಲೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಉಪನ್ಯಾಸಕ ಶ್ರೀನಿವಾಸ ಕಟ್ಟಿಮನಿ ಮಾತನಾಡಿ, ರಾಜಕುಮಾರ್ ಕೇವಲ ಚಲನಚಿತ್ರ ನಟರಾಗಿ ಅಷ್ಟೇ ಅಲ್ಲದೇ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿ ಗೋಕಾಕ್ ಚಳವಳಿ ಮೂಲಕ ಕನ್ನಡಭಾಷೆ ಅಸ್ತಿತ್ವ ಉಳಿಸಿದವರು. ತಮ್ಮ ಚಲನಚಿತ್ರಗಳ ಮೂಲಕ ಅವರು ದೇಶಕ್ಕೆ-ವಿಶ್ವಕ್ಕೆ ಉತ್ತಮವಾದ ಸಾಮಾಜಿಕ ಸಂದೇಶ ನೀಡಿದ್ದಾರೆ. ಅಂತಹ ಮೇರು ವ್ಯಕ್ತಿತ್ವ ಹೊಂದಿರುವ ರಾಜಕುಮಾರ್ ಅವರಿಗೆ ಸರ್ಕಾರ ಭೂಮಿ ನೀಡಿರುವುದು ಕನ್ನಡಿಗರಿರಾಗಿ ನಾವು ಹೆಮ್ಮೆ ಪಡುವಂತಹ ವಿಷಯ. ಆದರೆ ನಟ ಅಹಿಂಸಾ ಚೇತನ ಈ ರೀತಿ ಹೇಳಿಕೆ ನೀಡಿರುವುದು ವಿಷಾದನೀಯ ಕೂಡಲೇ ಕ್ಷಮೆ ಕೇಳಬೇಕು ಎಂದರು.

ಈ ಸಂದರ್ಭದಲ್ಲಿ ಸುರೇಶ ಹಿರೇಮಠ, ವಿಠ್ಠಲ ಕಾಂಬಳೆ, ರಾಜು ಶಿವಣಗಿ, ನೀಲಕಂಠ ತಳವಾರ, ರಮೇಶ ಮೇಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.