ಜಮಖಂಡಿ: ‘ತಾಲ್ಲೂಕಿನ ಆಲಗೂರ ಗ್ರಾಮದಲ್ಲಿ ಏಪ್ರಿಲ್ 23ರಿಂದ ಮೇ 1ರವರೆಗೆ 24 ವರ್ಷಗಳ ನಂತರ 1008 ಭಗವಾನ್ ಆದಿನಾಥ ತೀರ್ಥಂಕರರು ಹಾಗೂ ನವಗ್ರಹ ತೀರ್ಥಂಕರರ ತಥಾ, ಭಗವಾನ್ ಭರತೇಶ್ವರರ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ 1008 ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಜರುಗಲಿದೆ’ ಎಂದು ಗುಣಧರನಂದಿ ಮುನಿ ಮಹಾರಾಜರು ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಭಗವಾನ್ ಆದಿನಾಥ ತೀರ್ಥಂಕರ, ಭರತ–ಬಾಹುಬಲಿ ಮತ್ತು ನವರತ್ನದ ನವಗ್ರಹ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕ್ಷೇತ್ರಪಾಲ ಮಂದಿರದಲ್ಲಿ ಕ್ಷೇತ್ರಪಾಲ ದೇವನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಒಂಬತ್ತು ದಿನಗಳವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘23ರಂದು ಧ್ವಜಾರೋಹಣ ಇಂದ್ರ ಸಭೆ, 24ರಂದು ಗರ್ಭಕಲ್ಯಾಣ, 25ರಂದು ಭಗವದ್ ಜನ್ಮಕಲ್ಯಾಣ, 26ರಂದು ರಾಜ್ಯಾಭಿಷೇಕ, 27ರಂದು ದೀಕ್ಷಾಕಲ್ಯಾಣ, 28ರಂದು ಕೇವಲಜ್ಞಾನ ಕಲ್ಯಾಣ, 29ರಂದು ನಿರ್ವಾಣ ಕಲ್ಯಾಣ, 30ರಂದು ಮತ್ತು ಮೇ 1ರಂದು ಮಹಾಮಸ್ತಕಾಭಿಷೇಕ ನಡೆಯಲಿದೆ’ ಎಂದು ಹೇಳಿದರು.

‘ಆಚಾರ್ಯರಾದ ಕಲ್ಯಾಣ ಸಾಗರ ಮುನಿ ಮಹಾರಾಜರು, ಶಾಂತಿಸೇನ ಮುನಿ ಮಹಾರಾಜರು, ಪಾರ್ಶ್ವಸೇನ ಮುನಿ ಮಹಾರಾಜರು, ವೇಷಭೂಸೇನ ಮಹಾರಾಜರು, ಮಾತಾಜಿಗಳ, 100 ಜನ ಆಚಾರ್ಯರರು, ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ರಾಜ್ಯಪಾಲ ಥಾವರ್ಚಂದ ಗೆಹಲೋಥ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸಚಿವರು, ಸಂಸದರು, ಶಾಸಕರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು, ಸಾಹಿತಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಈ ಕಾರ್ಯಕ್ರಮವು ಜೈನ ಸಮಾಜಕ್ಕೆ ಮಾತ್ರ ಸಿಮಿತವಾಗಿಲ್ಲ. ಗ್ರಾಮದ ಎಲ್ಲ ಸಮಾಜದವರು ಸೇರಿ ಆಚರಿಸುತ್ತಿದ್ದಾರೆ. ಇದು ಸರ್ವಧರ್ಮ ಕಲ್ಯಾಣ ಮಹೋತ್ಸವ ಆಗಿದೆ. ದೇಶಗಳ ಮಧ್ಯೆ ನಡೆಯುತ್ತಿರುವ ಯುದ್ದ ಕೊನೆಯಾಗಿ, ಶಾಂತಿ ನೆಲೆಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ಕಲ್ಯಾಣಸಾಗರ ಮುನಿ ಮಹಾರಾಜರು, ವರ್ಧಮಾನ ನ್ಯಾಮಗೌಡ, ಸಿ.ಟಿ. ಉಪಾಧ್ಯ, ಆದಿನಾಥ ನರಸಗೊಂಡ, ಅಣ್ಣೇಶಿ ಪರಮಗೊಂಡ, ಭರತೇಶ ಖಿದ್ರಾಪೂರ, ಶ್ರೀಮಂತ ಖಿದ್ರಾಪೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-19-1151146257

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.