ಜಮಖಂಡಿ: ಇಲ್ಲಿನ ಕೋರ್ಟ್ ಕಟ್ಟಡ ಹಳೆಯದಾಗಿದ್ದು, ಕೋರ್ಟ್ ಸ್ಥಳಾಂತರವಾಗಬೇಕಿದೆ. ಸರ್ಕಾರ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ಕೋರ್ಟ್ ಸ್ಥಳಾಂತರ ಹಾಗೂ ನೂತನ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುತ್ತೆವೆ ಎಂದು ವಕೀಲರ ಸಂಘದ ನೂತನ ಅಧ್ಯಕ್ಷ ಎ.ಪಿ.ಕುಲಕರ್ಣಿ ಹೇಳಿದರು.

ವಕೀಲರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಿವಿಲ್ ಜಡ್ಜ್ ಪರೀಕ್ಷೆಯನ್ನು ನಮ್ಮ ಭಾಗದ ಹಲವಾರು ಕಿರಿಯ ವಕೀಲರು ಬರೆಯುತ್ತಿದ್ದಾರೆ. ಆದರೆ ಸರಿಯಾದ ಮಾರ್ಗದರ್ಶನದ ಕೊರತೆಯಿಂದ ಹೆಚ್ಚು ಜನರು ಆಯ್ಕೆಯಾಗುತ್ತಿಲ್ಲ. ಆದ್ದರಿಂದ ಪರೀಕ್ಷೆ ತಯಾರಿ ಕುರಿತು ನಮ್ಮ ಸಂಘದಿಂದ ಕಾರ್ಯಾಗಾರ ಮಾಡಲಾಗುವದು ಎಂದರು.

ಕಾರ್ಯದರ್ಶಿ ವೈ ಕೆ. ಕಡಪಟ್ಟಿ ಮಾತನಾಡಿದರು, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಭಟ್, ಜಂಟಿಕಾರ್ಯದರ್ಶಿ ಸಂಗಮೇಶ ಅಂಬಿ, ಸದಸ್ಯರಾದ ಶ್ರೀಶೈಲ ದಳವಾಯಿ, ಆರ್.ಎಂ.ಝಂಡೆ, ಎಸ್.ಕೆ.ಗೌಡಪ್ಪನವರ, ಯು.ಎಸ್.ಚರಕಿ, ಜೆ.ಆರ್.ಮಾಳಿ ಇದ್ದರು, ಆರ್.ಆರ್. ಕರೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು, ವಿ.ಜಿ.ಅಳ್ಳಿಕಟ್ಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-19-502477858

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.