ಜಮಖಂಡಿ: ಒಂದು ತಿಂಗಳಿಂದ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿದ್ದು, ಮೂರು ತಿಂಗಳಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಮಹಾರಾಷ್ಟ್ರದಿಂದ ನೀರು ಬಿಡಿಸುತ್ತಿಲ್ಲ. ಕೂಡಲೇ ನೀರು ಪೂರೈಸಬೇಕೆಂದು ಆಗ್ರಹಿಸಿ ಸೋಮವಾರ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದಿಂದ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ಮಾಡಿ ತಹಶೀಲ್ದಾರ್ ಅನೀಲ ಬಡಿಗೇರ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಮುಖಂಡ ಶ್ರೀಶೈಲ ಭೂಮಾರ ಮಾತನಾಡಿ, ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಪೂರೈಸಬೇಕು, ರೈತರು ಎಲ್ಲ ಸೌಲಭ್ಯವನ್ನು ಪ್ರತಿಭಟನೆ ಮಾಡಿಯೇ ಪಡೆಯುವಂತಾಗಿದೆ. ಜನ ಜಾನುವಾರುಗೆ ಕುಡಿಯಲು ನೀರಿಲ್ಲ, ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದೇವೆ. ಕೂಡಲೇ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ಮುಖಂಡ ರಾಜು ನದಾಫ್ ಮಾತನಾಡಿ, ರೈತರಿಗೆ ಬಿತ್ತನೆ ಪ್ರಾರಂಭಿಸಲು ಹಣವಿಲ್ಲ. ಕಬ್ಬಿನ ಬಾಕಿ ಬಿಲ್ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ನೀರಿಗಾಗಿ ತಾಲ್ಲೂಕು ಆಡಳಿತ ಸೌಧದ ಎದುರು ರೈತಸಂಘದಿಂದ ಪ್ರತಿಭಟನೆ ಮಾಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರಗೆ ಮನವಿ ಸಲ್ಲಿಸಲು ಕರೆದಾಗ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸರಿಯಾಗಿ ಸ್ಪಂದಿಸದೆ, ಮನವಿ ಸ್ವೀಕರಿಸದೆ ಕಚೇರಿಗೆ ತೆರಳಿದರು, ಇದಕ್ಕೆ ಆಕ್ರೋಶಗೊಂಡ ರೈತರು ಒಂದು ಗಂಟೆ ಪ್ರತಿಭಟನೆ ಮಾಡಿ ಮನವಿ ಸ್ವೀಕರಿಸಲು ಬರಬೇಕು ಎಂದು ಗಡುವು ನೀಡಿದರೂ ಬರಲಿಲ್ಲ, ನಂತರ ತಹಶೀಲ್ದಾರ್ ಅನೀಲ ಬಡಿಗೇರ ಬಂದು ಮನವಿ ಸ್ವೀಕರಿಸಿದರು.

ಮೇ 26ರಂದು ಅಧಿಕಾರಿಗಳ ವಿರುದ್ಧ ಚಿಕ್ಕಪಡಸಲಗಿ ಬ್ಯಾರೇಜ್ ಸಮೀಪದ ಆಲಗೂರ ಗೌಡ್ರಗಡ್ಡಿಯ ಹತ್ತಿರ ಜಮಖಂಡಿ-ವಿಜಯಪುರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.

ಸುರೇಶ ಹಂಚಿನಾಳ, ಧರೆಪ್ಪ ದಾನಗೊಂಡ, ಕಲ್ಲಪ್ಪ ಬಿರಾದಾರ, ಬಾಹುಬಲಿ ನ್ಯಾಮಗೌಡ, ಸಿದ್ದಪ್ಪ ಬನಜನವರ, ಶಿವಶಂಕರ ಪಾಟೀಲ, ಶಿವಪ್ಪ ಕುರಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-19-1352685943

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.