ಜಮಖಂಡಿ: ‘ತಾಲ್ಲೂಕಿನ ಚಿಕ್ಕಪಡಸಲಗಿ ಸಮೀಪ ಆಲಗೂರ ಗೌಡ್ರ ಗಡ್ಡಿಯ ಹತ್ತಿರ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡಿಸಬೇಕು’ ಎಂದು ಒತ್ತಾಯಿಸಿ ಮಂಗಳವಾರ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದಿಂದ ಜಮಖಂಡಿ– ವಿಜಯಪುರ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

‘ರೈತರಿಗೆ ನೀರಿನ ತೊಂದರೆಯಾಗಿ ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ನದಿಯಲ್ಲಿ ಗುಂಡಿ ತೆಗೆದು ಉಳಿದಿರುವ ನೀರನ್ನು ತಂದು ಹಾಕಲಾಗುತ್ತಿದೆ. ಅದರಲ್ಲಿ ಸಕ್ಕರೆ ಕಾರ್ಖಾನೆ ತ್ಯಾಜ್ಯ, ಚರಂಡಿ ನೀರು ಮಿಶ್ರಣವಾಗುತ್ತಿರುವುದರಿಂದ ಜಾನುವಾರುಗಳಿಗೆ ಗಂಟು ರೋಗ ಬರುತ್ತಿದೆ. ತಾಲ್ಲೂಕಾಡಳಿತ ಕೂಡಲೇ ನೀರಿನ ಸಮಸ್ಯೆ ಪರಿಹರಿಸಬೇಕು. ನಾಲ್ಕು ದಿನದಲ್ಲಿ ನೀರು ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಸಿದರು.

‘ಕಾರ್ಖಾನೆ ಮಾಲೀಕರು ಕಬ್ಬಿನ ಬಾಕಿ ನೀಡಲು ಮುಂದಾಗುತ್ತಿಲ್ಲ, ಜಿಲ್ಲಾಡಳಿತ ರೈತರಿಗೆ ಹಲವಾರು ದಿನಾಂಕಗಳನ್ನು ಹೇಳಿ ಮುಂದೆ ಹಾಕುತ್ತಾ ಕಾಲಹರಣ ಮಾಡಬಾರದು ಕೂಡಲೇ ಬಾಕಿ ಹಣ ಪಾವತಿಸಬೇಕು’ ಎಂದರು.

ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರು, ‘ರೈತರ ಸಮಸ್ಯೆ ಆಲಿಸಿ ನೀರಿಗಾಗಿ ಹಲವಾರು ಸಭೆ ಮಾಡಲಾಗಿದೆ, ಸಚಿವರಿಗೆ ಹಾಗೂ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ನಾಲ್ಕು ದಿನದಲ್ಲಿ ಮಹಾರಾಷ್ಟ್ರದಿಂದ ನೀರು ಬಿಡಿಸುವ ಕೆಲಸ ಮಾಡಲಾಗುವುದು’ ಎಂದರು.

‘ಸಮಸ್ಯೆಯ ತೀವ್ರತೆ ಅರಿತು ಕಳೆದ ಎರಡು ತಿಂಗಳಿನಿಂದ ಪ್ರತಿ ವಾರಕ್ಕೊಂದು ಸಭೆಯಲ್ಲಿ ಹಿಪ್ಪರಗಿ ಡ್ಯಾಂ ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಸರ್ಕಾರಕ್ಕೆ ವರದಿ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಪ್ರಸ್ತಾವ ಹೋಗಿದ್ದು, ನಾಲ್ಕು ದಿನಗಳಲ್ಲಿ ಕೃಷ್ಣಾನದಿಗೆ ನೀರು ಬರಲಿದೆ’ ಎಂದರು.

ರಸ್ತೆ ತಡೆಯಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಯಿತು. ಸಾವಳಗಿ ಮಾರ್ಗವಾಗಿ ಪ್ರಯಾಣಿಕರು ಸಂಚರಿಸಿದರು.

ಆಲಗೂರ ಧರಿದೇವರ ಮಠದ ಶಾಂತಮೂರ್ತಿ ಲಕ್ಷ್ಮಣಮುತ್ಯಾ, ಶ್ರೀಶೈಲ ಭೂಮಾರ, ರಾಜು ನದಾಫ್, ಸುರೇಶ ಹಂಚಿನಾಳ, ಧರೆಪ್ಪ ದಾನಗೊಂಡ, ಸದಾಶಿವ ಕಲೂತಿ, ಕಲ್ಲಪ್ಪ ಬಿರಾದಾರ, ಸಿದ್ದಪ್ಪ ಬನಜನವರ, ಬಾಹುಬಲಿ ನ್ಯಾಮಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-19-1141801805

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.