ಜಮಖಂಡಿ: ‘ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಸಾಹಿತ್ಯದ ಮೂಲಕ ಪ್ರಚುರಪಡಿಸುವುದು ನಮ್ಮ ಉದ್ದೇಶ’ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಸ್.ಜಿ. ಕೋಟಿ ಹೇಳಿದರು.

ಇಲ್ಲಿನ ಭಗೀರಥ ಸಮುದಾಯ ಭವನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತು ನೂತನ ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತೀಯ ಸಾಹಿತ್ಯವು ವೈದಿಕ ಮತ್ತು ಸಂಸ್ಕೃತ ಪರಂಪರೆ, ಬೌದ್ಧ-ಜೈನ ಧರ್ಮಗಳ ಪ್ರಾಕೃತ ಸಾಹಿತ್ಯ, ತಮಿಳು ಸಂಗಮ ಸಾಹಿತ್ಯದಿಂದ ಹಿಡಿದು ಆಧುನಿಕ ಕಾಲದವರೆಗೂ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ’ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಗೀತಾ ದಾನಶೆಟ್ಟಿ ಮಾತನಾಡಿ, ‘ಭಾರತೀಯ ಸಾಹಿತ್ಯವು ಕೇವಲ ಮನೋರಂಜನೆಯಲ್ಲದೆ, ನೈತಿಕ ಮೌಲ್ಯಗಳು, ದರ್ಶನ, ಆಧ್ಯಾತ್ಮಿಕತೆ ಮತ್ತು ಸಮಾಜ ಸುಧಾರಣೆಗೆ ಹೆಚ್ಚು ಒತ್ತು ನೀಡುತ್ತದೆ. ಸಾಹಿತ್ಯದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅಪಾರ’ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಎನ್. ಅಸ್ಕಿ ಮಾತನಾಡಿ, ‘ಋಗ್ವೇದದಂತಹ ಸಂಸ್ಕೃತ ಗ್ರಂಥಗಳು, ಉಪನಿಷತ್ತುಗಳು, ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಭಾರತೀಯ ಸಾಹಿತ್ಯದ ಬುನಾದಿಯಾಗಿವೆ’ ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಸಂಯೋಜಕ ವಿಕ್ರಂ ಬಸನಗೌಡರ, ಲೇಖಕ ಶಿವಾನಂದ ನೇಗಿನಾಳ ಮಾತನಾಡಿದರು. ಜಿ.ಐ.ಅವರಕವಾಡಮಠ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಘಟಕದ ಗೌರವಾಧ್ಯಕ್ಷ ಬಿ.ವಿ. ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಸಾಗರ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಸುರೇಶ ಕುಂಬಾರ, ಸಹ ಕಾರ್ಯದರ್ಶಿ ಪ್ರವೀಣ ಅರಸಗೊಂಡ, ಖಜಾಂಚಿ ಬಸವರಾಜ ಉಪ್ಪಾರ, ಸಚಿನ ಮರಾಠೆ, ಮಲ್ಲಿಕಾರ್ಜುನ ಹೋಳಿ, ಅರವಿಂದ ಕುಂಬಾರ, ಮಂಜು ಅತ್ತೆಪ್ಪನವರ, ಪ್ರಕಾಶ ಚಿಕ್ಕಲಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-19-1032053952

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.