ಜಮಖಂಡಿ: ಈ ಭಾಗದ ಜನರ ಜೀವನಾಡಿ ಕೃಷ್ಣೆಯ ಒಡಲು ಖಾಲಿಯಾಗುತ್ತಿದೆ. ತುಂಬಿ ಹರಿಯುವ ನದಿ ಈಗ ನೀರಿಲ್ಲದೇ ಬಿಸಿಲಿನ ಬೇಗೆಗೆ ಬಣಗುಡುತ್ತಿದೆ. ಸಾವಿರಾರು ಹೆಕ್ಟೇರ್ ಭೂಮಿ, ಲಕ್ಷಾಂತರ ಜನ, ಜಾನುವಾರು ಹಾಗೂ ಪಶುಪಕ್ಷಿಗಳ ನೀರಿನ ದಾಹ ತಣಿಸುವ ಕೃಷ್ಣೆಯ ಮಡಿಲಿನ ಜನರು ಕಣ್ಣೀರು ಹಾಕುವಂತಾಗಿದೆ.

ನದಿ ನೀರು ಖಾಲಿಯಾಗಿದ್ದು, ನದಿ ಪಾತ್ರದ ಜನರು ತಮ್ಮ ಬೆಳೆ ಉಳಿಸಿಕೊಳ್ಳಲು ನದಿಯಲ್ಲಿ ಜೆಸಿಬಿ ಯಂತ್ರದ ಸಹಾಯದಿಂದ ಚಿಕ್ಕ ಚಿಕ್ಕ ಗುಂಡಿ ತೆಗೆದು ನೀರು ಪಡೆಯುವುದಕ್ಕೆ ಪರದಾಡುತ್ತಿದ್ದಾರೆ.

ಈಗಿನಿಂದಲೇ ಮಳೆಗಾಗಿ ರೈತರು ಮುಗಿಲು ನೋಡುತ್ತಿದ್ದಾರೆ. ಆದರೆ ಮಳೆಯ ಸುಳಿವು ಸಿಗದೇ ರಣಬಿಸಿಲು ಹೊಡೆಯುತ್ತಿದೆ. ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಬೆಳೆದಿರುವ ಕಬ್ಬು ಬಿಸಿಲಿಗೆ ಒಣಗುತ್ತಿದೆ. ಭೂಮಿ ಹದಗೊಳಿಸಿದ್ದು ಮಳೆಯ ದಾರಿ ಕಾಯುತ್ತಿದ್ದಾರೆ. ಮಳೆ ಮುಂದೆ ಹೋದರೆ ಇನ್ನು ಒಂದು ವಾರದಲ್ಲಿ ಮಹಾರಾಷ್ಟ್ರದ ಕೊಯ್ನಾದಿಂದ ನೀರು ಬಿಡಿಸುವ ಅನಿವಾರ್ಯತೆ ಇದೆ.

ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯದಿಂದ ಚಿಕ್ಕಪಡಸಲಗಿ ಸಿದ್ದು ನ್ಯಾಮಗೌಡ ಬ್ಯಾರೇಜ್ (ಶ್ರಮ ಬಿಂದು ಸಾಗರ) ವರೆಗೆ ಹಿಂಭಾಗದ ಎಡ ಮತ್ತು ಬಲಭಾಗದ ಶಿರಗುಪ್ಪಿ, ಮುತ್ತೂರ, ಮೈಗೂರ, ಶೂರ್ಪಾಲಿ, ಜಂಬಗಿ, ತುಬಚಿ, ಕಂಕಣವಾಡಿ, ಕಡಕೋಳ, ಟಕ್ಕಳಕಿ, ಟಕ್ಕೊಡ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ತೊಂದರೆ ಎದ್ದು ಕಾಣುತ್ತಿದೆ.

ಪ್ರತಿವರ್ಷ ಹಿಪ್ಪರಗಿ ಜಲಾಶಯದಲ್ಲಿ ನೀರು ಸಂಗ್ರಹ ಇರುತ್ತಿತ್ತು, ಆದರೆ ಜಲಾಶಯದ ಗೇಟ್ ಕಿತ್ತು ನೀರು ಹರಿದು ಹೋಗಿರುವುದರಿಂದ ಸದ್ಯ ಹಿಪ್ಪರಗಿ ಜಲಾಶಯದಲ್ಲಿ 0.31 ಟಿಎಂಸಿ ಅಡಿ ನೀರು ಮಾತ್ರ ಇದೆ. ಈ ನೀರಿನಿಂದ ಜಮಖಂಡಿ ಹಾಗೂ ಸುತ್ತಲಿನ ಹಲವು ಗ್ರಾಮಗಳಿಗೆ ಜಾಕವೆಲ್ನಿಂದ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಈ ನೀರು ಖಾಲಿಯಾದರೆ ಕುಡಿಯುವ ನೀರಿನ ಹಾಹಾಕಾರ ಆರಂಭವಾಗುತ್ತದೆ. ಕೂಡಲೇ ಜನಪ್ರತಿನಿಧಿಗಳು ಮಹಾರಾಷ್ಟ್ರಕ್ಕೆ ಹೋಗಿ ನೀರು ಬಿಡಿಸಬೇಕು’ ಎಂಬುದು ರೈತರ ಒತ್ತಾಯವಾಗಿದೆ.

‘ರೈತರು ನೀರು ಬಿಡಿಸಬೇಕು ಎಂದು ಒತ್ತಾಯ ಮಾಡಿದಾಗ ಮೇ 1ರಂದು ಹಿಪ್ಪರಗಿ ಜಲಾಶಯದಿಂದ 0.10 ಟಿಎಂಸಿ ಅಡಿ ನೀರು ಬಿಟ್ಟಿದ್ದಾರೆ, ಆದರೆ ಅದು ಶಿರಗುಪ್ಪಿ ಗ್ರಾಮವನ್ನು ದಾಟಿಲ್ಲ ರೈತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಮಹಾರಾಷ್ಟ್ರದಿಂದ ನೀರು ಬಿಡಿಸಬೇಕು’ ಎಂದು ರೈತ ಮುಖಂಡ ಕಲ್ಲಪ್ಪ ಬಿರಾದಾರ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-19-1694076532

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.