ಜಮಖಂಡಿ: ಭಾರತ ಸರ್ಕಾರ ಭೂಸ್ವಾಧಿನ ಕಾಯ್ದೆ 2013ರ ಪ್ರಕಾರ ಮೊದಲು ಕೃಷ್ಣಾ ನದಿ ಭೂಸ್ವಾಧಿನ ಬಾಧಿತರಾಗಿರುವವರಿಗೆ ನಿವೇಶನ ಹಾಗೂ ಮೂಲ ಸೌಲಭ್ಯಗಳನ್ನು ನೀಡಿ ನಂತರ ಜಮೀನು ಭೂಸ್ವಾಧಿನ ಮಾಡಬೇಕು ಎಂದು ವಕೀಲ ಸಿ.ಆರ್. ಸುತಾರ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಭೂಸ್ವಾಧಿನ ಪ್ರಕ್ರಿಯೆಯನ್ನು ಕಾನೂನಾತ್ಮಕ ಮಾಡದೇ ಶ್ರೀಮಂತರು ಹಾಗೂ ಕೆಲ ರಾಜಕೀಯ ಮುಖಂಡರು ಹೇಳಿದಂತೆ ಮಾಡುತ್ತಾರೆ. ಇದರಿಂದ ಬಡವರು, ನಿರ್ಗತಿಕರಿಗೆ ತೊಂದರೆ ಆಗುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಸಮೀಕ್ಷೆ ಮಾಡಿ ಯಾರು ವಂಚಿತರಾಗದಂತೆ ನಿವೇಶನ ಹಾಗೂ ಪರಿಹಾರ ನೀಡಬೇಕು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಉನ್ನತಮಟ್ಟದ ಅಧಿಕಾರಿ ನೇಮಕ ಮಾಡಬೇಕು’ ಎಂದರು.

ಆಲಮಟ್ಟಿ 524.6 ಮೀ ನಿವೇಶನ ಮುಳುಗಡೆಗೆ ವಂಚಿತರಾದ ಬಡವರಿಗೆ, ಕೂಲಿಕಾರ್ಮಿಕರಿಗೆ ನಿವೇಶನ ಒದಗಿಸಬೇಕು ಎಂದು ಹತ್ತಾರು ಗ್ರಾಮದ ಮುಖಂಡರು ಸೇರಿ 2014 ರಿಂದ ಪತ್ರ ಬರೆಯಲಾಗಿತ್ತು. ಆದರೆ ಪುನರ್ವಸತಿ ಕೇಂದ್ರದ ಅಧಿಕಾರಿಗಳು ಅದನ್ನು ಪರಿಗಣಿಸಿರಲಿಲ್ಲ. ಆದರೆ ಇತ್ತೀಚೆಗೆ ಜಿಲ್ಲಾಧಿಕಾರಿ ಮಾರ್ಗದರ್ಶನ ನೀಡಲು ಸರ್ಕಾರಕ್ಕೆ ಪತ್ರ ಬರೆದಿರುವುದು ಆಶಾದಾಯಕವಾಗಿದೆ ಎಂದರು.

ರೈತ ಸಾಂತ್ವನ ಕೇಂದ್ರದಿಂದ 26 ಗ್ರಾಮಗಳ ಮುಖಂಡರು ಸೇರಿ 2022 ರಲ್ಲಿ ಅಂದಿನ ನೀರಾವರಿ ಸಚಿವರಿಗೆ ಸೇರಿದಂತೆ ನೀರಾವರಿ ಜಮೀನಿಗೆ ₹40 ಲಕ್ಷ, ಒಣಭೂಮಿಗೆ ₹30 ಲಕ್ಷ ನೀಡಲು ಒತ್ತಡ ಹಾಕಲಾಗಿತ್ತು. ಆದರೆ ಕೆಲ ರಾಜಕೀಯ ಮುಖಂಡರು ತಾವು ಮಾಡಿಸಿರುವಂತೆ ಬಿಂಬಿಸಿಕೊಳ್ಳಬಾರು, ರೈತರು ರಾಜಕಾರಣಿಗಳ ಮಾತು ಕೇಳಿ ಹಾಳಾಗಬಾರದು, ಇಲಾಖೆಯ ಬೆನ್ನು ಹತ್ತಿ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದರು.

ಶ್ರೀಶೈಲ ಭೂಮಾರ, ಧರೆಪ್ಪ ದಾನಗೊಂಡ, ಯಾಕೂಬ ನದಾಫ್, ಸಿದ್ದು ಬನಜನವರ, ಮಂಜು ಧನಗರ, ಗಿರೀಶ ಬಳೋಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-19-1408814548

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.