ಜಮಖಂಡಿ: ಚಿಕ್ಕಮ್ಮನ ಮಗನೇ ಸಹೋದರನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ ಘಟನೆ ತಾಲ್ಲೂಕಿನ ಕುರಗೋಡದಲ್ಲಿ ಈಚೆಗೆ ನಡೆದಿದೆ. ಈ ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದೆ.

ಸಿದ್ದು ಮಲ್ಲಪ್ಪ ಬಿರಾದಾರ (34) ಕೊಲೆಯಾದ ವ್ಯಕ್ತಿ. ಸಿದ್ದು ಮಲ್ಲಪ್ಪ ಬೀರಾದಾರ ಬೈಕ್ ಮೇಲೆ ತಮ್ಮ ತೋಟಕ್ಕೆ ಹೋಗುವಾಗ ಅಡ್ಡಗಟ್ಟಿ ಕಬ್ಬಿಣ ರಾಡ್ನಿಂದ ಮಾರ್ಗಮಧ್ಯದಲ್ಲಿ ಹೊಡೆದು ಕೊಲೆ ಮಾಡಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಸಾವಳಗಿ ಪೊಲೀಸರು ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಎರಡು ಕುಟುಂಬಗಳ ನಡುವೆ ಜಮೀನಿನ ವಿವಾದ ಇತ್ತು. ಮೃತ ಸಿದ್ದು ಬಿರಾದಾರ ಮದ್ಯ ಸೇವಿಸಿ ಮನೆಗೆ ಬಂದು ಸಹೋದರ ಶ್ರೀಶೈಲ ಜೊತೆಗೆ ಆಗಾಗ ಜಗಳ ಮಾಡುತ್ತಿದ್ದ, ಎಲ್ಲ ಜಮೀನು ನನಗೆ ಸೇರಿದ್ದು, ನೀವು ಇಲ್ಲಿಂದ ಹೋಗಬೇಕು ಎಂದು ಬೆದರಿಕೆ ಹಾಕುತ್ತಿದ್ದ, ಇದೇ ವಿಚಾರವಾಗಿ ಬೇಸತ್ತು ಶ್ರೀಶೈಲ ತನ್ನ ಸಂಬಂಧಿ ರವಿ ಶಿವಪೂಜಿ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದು, ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬಸವರಾಜ ಹಗರಿ ಇತನಿಗೆ ₹1 ಲಕ್ಷಕ್ಕೆ ಸುಪಾರಿ ನೀಡಿದ್ದಾರೆ.

ನಂತರ ಮುಂಗಡವಾಗಿ ₹5 ಸಾವಿರ ನೀಡಿದ್ದರು, ಮಹಾರಾಷ್ಟ್ರದಿಂದ ಎರಡು ಬೈಕ್ ಮೇಲೆ ಬಂದ ಬಸವರಾಜ ಹಗರಿ, ಆಕಾಶ ಯಳ್ಳೂರ, ಪ್ರಥಮೇಶ ಮಹಾಜನ ಮೂರು ದಿನ ಮೃತ ಸಿದ್ದು ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ.

ಮೃತನ ಸಹೋದರ ಶ್ರೀಶೈಲ ಮಲ್ಲಪ್ಪ ಬಿರಾದಾರ, ಕುರುಗೋಡ ಗ್ರಾಮದ ರವಿ ಶಂಕರ ಶಿವಪೂಜಿ, ಜತ್ತ ತಾಲ್ಲೂಕು ಬಿಳ್ಳೂರ ಗ್ರಾಮದ ಬಸವರಾಜ ಅಪ್ಪಾಸಾಹೇಬ ಹಗರಿ, ಆಕಾಶ ಶಂಕರ ಯಳ್ಳೂರ, ಪ್ರಥಮೇಶ ಸಂಜಯ ಮಹಾಜನ ಬಂಧಿತರು.ಸಿಪಿಐ ಮಲ್ಲಪ್ಪ ಮಡ್ಡಿ, ಸಾವಳಗಿ ಪಿಎಸ್ಐ ಅಪ್ಪಣ್ಣ ಐಗಳಿ ಹಾಗೂ ಸಿಬ್ಬಂದಿ ಸೇರಿ ಪ್ರಕರಣ ಬೇಧಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-19-1280636801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.