ಜಮಖಂಡಿ: ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಹನುಮಾನ ದೇವರ ಜಾತ್ರೆಗೆ (ದೇಣಿಗೆ) ಕೊಟ್ಟಿಲ್ಲ ಎಂಬ ಕಾರಣಕ್ಕೆ ಗ್ರಾಮದ ಏಳು ಕುಟುಂಬಗಳಿಗೆ ಬಹಿಷ್ಕಾರ ಹಾಕುವುದಾಗಿ ಗ್ರಾಮದಲ್ಲಿ ಡಂಗುರ ಸಾರಿದ್ದರು ಎಂಬ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಏ. 5ರಂದು ಸಾರ್ವಜನಿಕವಾಗಿ ಪಟ್ಟಿ ನೀಡದವರಿಗೆ ಗ್ರಾಮದ ಸ್ವಾಮಿಗಳು, ಪೂಜಾರಿಗಳು ಹಾಗೂ ಗ್ರಾಮದವರು ಯಾವುದೇ ಕಾರ್ಯಕ್ಕೆ ಹೋಗಬಾರದು, ಕಿರಾಣಿ ಅಂಗಡಿಗಳಲ್ಲಿ ಸಾಮಗ್ರಿ ನೀಡಬಾರದು ಎಂದು ಅದೇ ಗ್ರಾಮದ ಪ್ರಭು ಹೂಗಾರ ಸಾರಿದ್ದು ಇದರಿಂದ ನಮ್ಮ ಕುಟುಂಬಕ್ಕೆ ಭಾರಿ ಅಪಮಾನವಾಗಿದೆ. ಡಂಗುರ ಸಾರಿದವರ ಮೇಲೆ ಹಾಗೂ ಅದರ ಹಿಂದೆ ಇರುವ ಗ್ರಾಮದ ಹಿರಿಯರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಯಲ್ಲಪ್ಪ ದರಿಯಪ್ಪ ಛಗನ್ನವರ ಒತ್ತಾಯಿಸಿದ್ದಾರೆ.

ವಿಷಯ ತಿಳಿದು ತಹಶೀಲ್ದಾರ್ ಅನೀಲ ಬಡಿಗೇರ, ಪಿಎಸ್ಐ ಗಂಗಾಧರ ಪೂಜಾರಿ ಹಾಗೂ ಬಿಸಿಎಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಗ್ರಾಮದ ಹಿರಿಯರನ್ನು ಕರೆದು, ‘ದೇಣಿಗೆ ಕೇಳದಂತೆ ತಾಕೀತು ಮಾಡಿ ಸಮಸ್ಯೆಯನ್ನು ಪರಿಹರಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಗದೇವ ಪಾಸೋಡಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-19-326378053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.