ಜಮಖಂಡಿ: ‘ದೇಶದ ಹಿತಕ್ಕಾಗಿ ದುಡಿಯುವ ಏಕೈಕ ಪಕ್ಷ ಬಿಜೆಪಿ, ವ್ಯಕ್ತಿಗಿಂತಲೂ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು ಎಂಬ ಮನೋಭಾವದಿಂದ ದೇಶದ ಹಿತಕ್ಕಾಗಿ ಪಕ್ಷದ ಪ್ರತಿಯೊಬ್ಬರು ಕಾರ್ಯನಿರ್ವಹಿಸುತ್ತಾರೆ’ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ತಾಲ್ಲೂಕಿನ ಸಿದ್ದಾಪುರ ಗ್ರಾಮದ ಪುಷ್ಪಾತಾಯಿ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಆಯೋಜಿಸಿದ್ದ ಪಂಡಿತ ದೀನದಯಾಳ ಉಪಾಧ್ಯಾಯ ಪ್ರ-ಶಿಕ್ಷಣ ಮಹಾಅಭಿಯಾನದ ಅಂಗವಾಗಿ ಈಚೆಗೆ ನಡೆದ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬಿಜೆಪಿ ಕೇವಲ ರಾಜಕೀಯ ಪಕ್ಷವಾಗಿರದೇ ಸನಾತನ ಸಂಸ್ಕೃ ತಿ, ರಾಷ್ಟ್ರಪ್ರೇಮ, ಇತಿಹಾಸ ಗಮನದಲ್ಲಿಟ್ಟು ಕೊಂಡು ಸಮೃದ್ಧ, ಬಲಿಷ್ಠ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ’ ಎಂದರು.

‘ಪಕ್ಷ ಕಟ್ಟಿದ ಅನೇಕ ಹಿರಿಯರ ಪರಿಶ್ರಮ, ತ್ಯಾಗದಿಂದಾಗಿ ಇಂದು ವಿಶ್ವದ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷವಾಗಿ ಬೆಳೆದು ನಿಂತಿದೆ. ಮೂರು ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ನಡೆಯುತ್ತದೆ. ಪಕ್ಷದ ಚಿಂತನೆ, ಉದ್ದೇಶಗಳನ್ನು ಮೆಚ್ಚಿ ಸಾಕಷ್ಟು ಜನರು ಸದಸ್ಯತ್ವ ಪಡೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ‘ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಬೆಳೆಸಲು, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅಭ್ಯಾಸವರ್ಗ, ಪ್ರಶಿಕ್ಷಣ ವರ್ಗ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ’ ಎಂದರು.

‘ಪಂಡಿತ್ ದೀನ ದಯಾಳ ಉಪಾಧ್ಯಾಯರು ಪಕ್ಷದ ನೇತೃತ್ವ ವಹಸಿಕೊಂಡು ಪಕ್ಷಕ್ಕೆ ತತ್ವ, ಶಿಕ್ಷಣ, ವಿಚಾರಗಳನ್ನು ನೀಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರಕ್ಕೆ ಚಿಂತನೆ ನಡೆಸಿದ್ದ ಅವರು ಅಂತ್ಯೋದಯ ಎಂಬ ಹೆಸರುನೀಡಿದ್ದರು. ಉಪಾಧ್ಯಾಯರ ವಿಚಾರಗಳು ಇಂದಿಗೂ ಜೀವಂತವಾಗಿವೆ’ ಎಂದು ತಿಳಿಸಿದರು.

ನಗರಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಗ್ರಾಮೀಣ ಮಂಡಲ ಅಧ್ಯಕ್ಷ ಮಲ್ಲು ದಾನಗೊಂಡ, ವಿಜಯಲಕ್ಷ್ಮಿ ತುಂಗಳ, ಗೀತಾ ಸೂರ್ಯವಂಶಿ, ಶಶಿ ವಿಶ್ವಬ್ರಾಹ್ಮಣ, ಸೇರಿದಂತೆ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-825866609

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.