ಜಮಖಂಡಿ: ತಂದೆ-ತಾಯಿಗಳು ಕೊಟ್ಟ ಸಂಸ್ಕಾರದಂತೆ ಮಕ್ಕಳು ಬೆಳೆಯುತ್ತಾರೆ. ಆದ್ದರಿಂದ ಮಕ್ಕಳಿಗೆ ದುಡ್ಡಿನ ಮತ್ತು ಅನ್ನದ ಬೆಲೆ ತಿಳಿಸಿಕೊಡಬೇಕು ಎಂದು ಓಲೆಮಠದ ಆನಂದ ದೇವರು ಹೇಳಿದರು.

ವ್ಯಸನಮುಕ್ತ ಗ್ರಾಮಗಳ ನಿರ್ಮಾಣದ ಸಂಕಲ್ಪ ದೊಂದಿಗೆ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಕುರಿತು ನಗರದ ಓಲೆಮಠದ ಆಶ್ರಯದಲ್ಲಿ ತಾಲ್ಲೂಕಿನ ಟಕ್ಕಳಕಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಜನಜಾಗೃತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಚಿಕ್ಕಮಕ್ಕಳ ಮುಂದೆ ಸಣ್ಣಪುಟ್ಟ ಸುಳ್ಳುಗಳನ್ನು ಹೇಳಿದರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಮಹಾಸುಳ್ಳುಗಾರ, ಮೋಸಗಾರ ಹಾಗೂ ದರೋಡೆಕೋರರಾಗುವ ಅಪಾಯವಿರುತ್ತದೆ. ಆದ್ದರಿಂದ ಪಾಲಕರು ಮಕ್ಕಳ ಮುಂದೆ ಸುಳ್ಳು ಮಾತನಾಡಬಾರದು ಎಂದರು.

ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ದುಶ್ಚಟಗಳನ್ನು ಬಿಡಿಸಿ ಮನೆಗೆ ಬೆಳಕು ಕೊಡುವ ಸತ್ಕಾರ್ಯವನ್ನು ಓಲೆಮಠದ ಪೂಜ್ಯರು ಮಾಡಿದ್ದಾರೆ. ಹಾಗಾಗಿ ದುಶ್ಚಟಗಳನ್ನು ಬಿಡುವುದಾಗಿ ಪ್ರಮಾಣ ಮಾಡಿದ ಯುವಕರು ಮರಳಿ ದುಶ್ಚಟಕ್ಕೆ ಅಂಟಿಕೊಳ್ಳಬಾರದು ಎಂದರು. ಮುಖಂಡ ಮುತ್ತಣ್ಣ ಹಿಪ್ಪರಗಿ ಝುಂಜರವಾಡದ ಬಸವರಾಜ ಶರಣರು ಮಾತನಾಡಿದರು.

ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ, ನಗರಸಭೆ ಮಾಜಿ ಅಧ್ಯಕ್ಷ ಪರಮಾನಂದ ಗವರೋಜಿ, ಬಿ.ಜಿ. ಪಾಟೀಲ, ನಿಖಿಲ ಮಹಾಬಳಶೆಟ್ಟಿ, ವೈ.ಎಸ್. ನ್ಯಾಮಗೌಡ, ಶಿವಗೌಡ ಪಾಟೀಲ, ಧರೆಪ್ಪ ಆಲಗೂರ, ರುದ್ರಯ್ಯಸ್ವಾಮಿ, ಸಂಜೀವ ಹುದ್ದಾರ, ಸಂಗಮೇಶ ಗೆಣ್ಣೂರ, ಸತೀಶ ಗೆಣ್ಣೂರ, ಟಿ.ಪಿ. ಗಿರಡ್ಡಿ, ಸದಾನಂದ ಬಾಗೇವಾಡಿ ಇದ್ದರು.

ಆನಂದ ಬ್ಯಾಳಿ, ಹನಮಂತ ಅಂಕದ ಸಂಗೀತ ಸೇವೆ ಸಲ್ಲಿಸಿದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಮಾತನಾಡಿದರು. ಶಿಕ್ಷಕ ನೇಮಿನಾಥ ನ್ಯಾಮಗೌಡ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-19-68011393

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.