ಜಮಖಂಡಿ: ಗ್ರಾಮೀಣ ಪ್ರದೇಶದಲ್ಲಿ ತುರ್ತು ಚಿಕಿತ್ಸಾ ಸೌಲಭ್ಯಗಳ ಕೊರತೆ ಇರುತ್ತದೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಆಂಬುಲನ್ಸ್ ಖರೀದಿ ಮಾಡಲಾಗಿದ್ದು, ಜನರು ಇದರ ಸದು ಪಯೋಗ ಪಡೆದುಕೊಳ್ಳಬೇಕು ಎಂದು ರೋಟರಿ ಗವರ್ನರ್ ಶರದ್ ಪೈ ಹೇಳಿದರು.

ಇಲ್ಲಿನ ಸಿದ್ದಿ ವಿನಾಯಕ ಆಸ್ಪತ್ರೆಯ ಆವರಣದಲ್ಲಿ ಶನಿವಾರ ರೋಟರಿ ಸಂಸ್ಥೆ ರಾಮತೀರ್ಥ ವತಿಯಿಂದ ಅಂತರರಾಷ್ಟ್ರೀಯ ರೋಟರಿ ಫೌಂಡೇಶನ ಯೋಜನೆಯ ಅನುದಾನದಡಿ ₹ 44 ಲಕ್ಷ ಮೌಲ್ಯದ ಎರಡು ಐಸಿಯು ಕಾರ್ಡಿಯಾಕ್ ಅಂಬುಲೇನ್ಸ್ ವಾಹನಗಳನ್ನು ಸಿದ್ದಿ ವಿನಾಯಕ ಆಸ್ಪತ್ರೆಗೆ ಹಸ್ತಾಂತರ ಮಾಡಿ ಮಾತನಾಡಿದರು.

ಡಾ.ವಿಜಯ ಮೇತ್ರಿ ಮಾತನಾಡಿ, ಜನರ ಜೀವ ಉಳಿಸುವ ಕಾರ್ಯದಲ್ಲಿ ಆಂಬುಲನ್ಸ್ ಮುಖ್ಯಪಾತ್ರ ವಹಿಸುತ್ತದೆ, 25 ಕಿ.ಮೀ ಒಳಗೆ ತೊಂದರೆಯಾದರೆ ಉಚಿತವಾಗಿ ಆಂಬುಲನ್ಸ್ ಸೇವೆಯನ್ನು ನೀಡಲಾಗುವುದು ಎಂದರು.

ಡಾ.ಗಿರೀಶ ಮಾಸೂರ್ಕರ್, ರೋಟರಿ ರಾಮತೀರ್ಥ ಅಧ್ಯಕ್ಷ ಕಿರಣ ಜಾಲಿಹಾಳ, ಮಲ್ಲಿಕಾರ್ಜುನ ಬಡೀಗೆರ, ರಾಜು ವಾರದ, ಅಶೀಖ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-19-800303914

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.