ಜಮಖಂಡಿ: ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ನೆಲಕಚ್ಚುತ್ತಿದ್ದು, ಈರುಳ್ಳಿ ಬೆಳೆದ ರೈತ ಕಣ್ಣಿರು ಹಾಕುವಂತಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಈರುಳ್ಳಿ ದರ ₹ 400 ರಿಂದ ₹ 900 ಇದೆ. ಮಾರ್ಚ್ ತಿಂಗಳಲ್ಲಿ ದರ ₹ 1,500 ಇತ್ತು. ಆದರೆ ಕೆಲ ದಿನಗಳಿಂದ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿಲ್ಲ.

ಈ ಬಾರಿ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಮರೆಗುದ್ದಿ ಹಾಗೂ ಸಾವಳಗಿ ಭಾಗದಲ್ಲಿ ಹೆಚ್ಚಿನ ರೈತರು ಈರುಳ್ಳಿ ಬೆಳೆದಿದ್ದಾರೆ, ರೈತರಿಗೆ ಈರುಳ್ಳಿ ಎಥೆಚ್ಚವಾಗಿ ಬೆಳೆದಿದೆ ಆದರೆ ದರ ಇಲ್ಲದಕ್ಕೆ ರೈತರಿಗೆ ನಿರಾಸೆಯಾಗಿದೆ.

ಒಂದು ಎಕರೆ ಈರುಳ್ಳಿ ನಾಟಿ ಮಾಡುವ ಸಂದರ್ಭದಲ್ಲಿ ಈರುಳ್ಳಿ ಸಸಿಗೆ ₹ 8 ಸಾವಿರದಿಂದ ₹ 10 ಸಾವಿರ, ನಾಟಿ ಮಾಡಲು ₹ 10 ಸಾವಿರದಿಂದ 12 ಸಾವಿರ, ಔಷದ, ಗೊಬ್ಬರ, ಕಸ ತೆಗೆಯಲು ಸೇರಿ ₹ 15 ಸಾವಿರದಿಂದ ₹ 20 ಸಾವಿರ ಹಾಗೂ ಬೆಳೆದ ಫಸಲನ್ನು ಕಿತ್ತು ಈರುಳ್ಳಿ ಕೊಯ್ದು ಸ್ವಚ್ಚತೆ ಮಾಡಲು ₹ 10 ಸಾವಿರದಿಂದ ₹ 15 ಸಾವಿರ ಖರ್ಚಾಗುತ್ತದೆ ಒಂದು ಎಕರೆ ಈರುಳ್ಳಿ ನಾಟಿಯಿಂದ ಫಸಲು ಬರುವವರೆಗೆ ₹ 60 ಸಾವಿರದಿಂದ ₹ 70 ಸಾವಿರ ಖರ್ಚಾಗುತ್ತದೆ’ ಎಂದು ರೈತ ಮುಖಂಡ ಕಲ್ಲಪ್ಪ ಬಿರಾದಾರ ತಿಳಿಸಿದರು.

‘ಒಂದು ಎಕರೆ ಪ್ರದೇಶದಲ್ಲಿ ಒಳ್ಳೆಯ ಬೆಳೆ ಬಂದರೆ 100 ಕ್ವಿಂಟಲ್ಗೂ ಅಧಿಕ ಪ್ರಮಾಣದ ಈರುಳ್ಳಿ ಬೆಳೆಯುತ್ತೇವೆ. ಪ್ರತಿ ಕ್ವಿಂಟಲ್ ಇಂದಿನ ಬೆಲೆ ₹ 600 ರಿಂದ ₹ 800. ರೈತರಿಗೆ ಲಾಭ ಆಗುವದಿಲ್ಲ. ಆದ್ದರಿಂದ ಸರ್ಕಾರ ಸಹಾಯಧನ ನೀಡಬೇಕು. ಇಲ್ಲದಿದ್ದರೆ, ಬೆಳೆಯನ್ನು ಹೊಲದಲ್ಲಿ ಬಿಟ್ಟು ರೋಟರ ಹೊಡೆದರೆ ನೆಲಕ್ಕೆ ಗೊಬ್ಬರವಾಗುತ್ತದೆ’ ಎಂದು ರೈತ ಪ್ರದೀಪ ವಿವರಿಸಿದರು.

ಸೆಪ್ಟೆಂಬರ್ನಲ್ಲಿ ಈರುಳ್ಳಿ ದರ ಏರಬಹುದು. ಅಲ್ಲಿವರೆಗೆ ಈರುಳ್ಳಿಯನ್ನು ಸಂಗ್ರಹಣಾ ಘಟಕದಲ್ಲಿ ಇಡಬಹುದು. ಘಟಕ ನಿರ್ಮಾಣಕ್ಕೆ ಇಲಾಖೆಯಿಂದ ₹ 1 ಲಕ್ಷದವರೆಗೆ ಸಹಾಯ ಧನ ನೀಡುತ್ತೇವೆ
-ಸಚಿನ ಮಾಚಕನೂರ, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.