ಜಮಖಂಡಿ: ನಗರದ ಅಂಜುಮನ್ ಎ-ಇಸ್ಲಾಂ ಕಮಿಟಿಯ ಬೃಹತ್ ಶಾದಿಮಹಲ್ ನಿರ್ಮಾಣಕ್ಕೆ ಇಲಾಖೆಯಿಂದ 5 ಕೋಟಿ ರೂ ಅನುದಾನ ನೀಡಲಾಗುವುದು ಎಂದು ವಸತಿ, ವಕ್ಫ ಅಲ್ಪಸಂಖ್ಯಾರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ನಗರದ ಮಟನ್ ಮಾರ್ಕೆಟ್ ಹತ್ತಿರದ ಅಂಜುಮನ್ ಎ- ಇಸ್ಲಾಂ ಕಮಿಟಿ ಜಾಗದಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಎಲ್ಲರೂ ಸ್ಮರಿಸಬೇಕು. ಅವರು ನೀಡಿದ ಸಂವಿಧಾನದಿಂದ ನಾನು ಇಂದು ಸಚಿವನಾಗಿ ನಿಮ್ಮ ಮುಂದೆ ಬಂದಿದ್ದೇನೆ’ ಎಂದರು.

ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ತೌಫೀಕ ಪಾರ್ಥನಳ್ಳಿ ಮಾತನಾಡಿ, ನಗರದಲ್ಲಿ ಸುಸಜ್ಜಿತ ಶಾದಿಮಹಲ್ ಅವಶ್ಯಕತೆ ಇದೆ, ಬರುವ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುವುದು ಎಂದರು.

ಮೌಲಾನಾ ಮುಸ್ತಫಾ ನೂರಾನಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ, ಇಲಾಹಿ ಕಂಗನೊಳ್ಳಿ, ಮಾಮೂನ ಪಾರ್ಥನಳ್ಳಿ, ಅಯ್ಯೂಬ ಪಾರ್ಥನಳ್ಳಿ, ಮನ್ಸೂರಸಯ್ಯದ, ಅಲ್ತಾಪ ಬಾಗವಾನ, ರಿಯಾಜ ಅವಟಿ, ಖೀಜರ ಪೆಂಡಾರಿ, ಅಬುಬಕರ ಕುಡಚಿ, ಕಮರುದ್ದಿನ್ ಮುರಸಲ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.