ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‍ ತೊರೆದು ಕಾಂಗ್ರೆಸ್‍ ಸೇರ್ಪಡೆ

Last Updated 20 ನವೆಂಬರ್ 2020, 16:38 IST
ಅಕ್ಷರ ಗಾತ್ರ

ಇಳಕಲ್: ಜೆಡಿಎಸ್‍ ತೊರೆದ ಕಾರ್ಯಕರ್ತರು ಹಾಗೂ ಮುಖಂಡರುಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಮ್ಮುಖದಲ್ಲಿ ಈಚೆಗೆ ಕಾಂಗ್ರೆಸ್ ಪಕ್ಷ ಸೇರಿದರು.

ಕಾಶಪ್ಪನವರ ಗೃಹ ಕಚೇರಿಯಲ್ಲಿ ಜಿಡಿಎಸ್‍ನಿಂದ ಮಂಜುನಾಥ ಸಪ್ಪರದ, ಮಹಾಂತೇಶ ವಕ್ಕಲಕುಂಟಿ, ಮೆಹಬೂಬ ನದಾಫ್, ಸದ್ದಾಂ ಹುಸೇನ್, ಮಂಜುನಾಥ ಕುಂಬಾರ, ಕಿರಣ ವೀರಾಪೂರ ಹಾಗೂ ನಿಖಿಲ್‍ ಯುವಪಡೆಯ ಜಿಲ್ಲಾ ಅಧ್ಯಕ್ಷ ಶಶಿ ಕಾಂಬನೆ ಕಾಂಗ್ರೆಸ್‍ ಸೇರಿದರು.

ಈ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪನವರ ಮಾತನಾಡಿ, ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರ ಇದ್ದು,‌ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ದೇಶ ಕಟ್ಟಲು ಪಣತೂಟ್ಟಿದೆ. ಜಾತ್ಯತೀತ ನಿಲುವು ಹೂಂದಿರುವ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ನಂಬಿ ಪಕ್ಷಕ್ಕೆ ಬಂದಿರುವುದು ಅತೀವ ಸಂತಸವಾಗಿದೆ. ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲಾಗುತ್ತಿದ್ದು, ಎಲ್ಲರೂ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.

ನಗರಸಭೆ ಸದಸ್ಯ ಅಮೃತ್ ಬಿಜ್ಜಳ, ಮುಖಂಡರಾದ ಜಬ್ಬಾರ ಕಲಬುರ್ಗಿ, ಮೆಹಬೂಬ ಸರಕಾವಸ್, ಮೆಹಬೂಬ ಖತೀಬ, ಯುವರಾಜ ಚಲವಾದಿ, ವಸೀಮ್ ಜಾಗಿರದಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT