ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಸಿದ್ದೇಶ್ವರ ಶ್ರೀ ಕ್ರಿಯಾ ಸಮಾಧಿ

ಗುಳೇದಗುಡ್ಡ: ಹರಿದು ಬಂದ ಭಕ್ತಸಾಗರ
Last Updated 16 ಮಾರ್ಚ್ 2020, 14:59 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದಲ್ಲಿ ಭಾನುವಾರ ಲಿಂಗೈಕ್ಯರಾದ ಮರಡಿಮಠದ ಹಿರಿಯ ಪೀಠಾಧಿಪತಿ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ (81) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸೋಮವಾರ ಭಕ್ತಸಾಗರವೇ ಹರಿದು ಬಂತು.

ಕಾಶಿಪೀಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ 80ಕ್ಕೂ ಹೆಚ್ಚು ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಭಕ್ತರು ಅಂತಿಮ ದರ್ಶನ ಪಡೆದರು. ವೃದ್ಧರು, ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಅಂತಿಮ ದರ್ಶನ ಪಡೆದರು. ಈ ವೇಳೆ ಹಲವರು ಬಿಕ್ಕಿ ಬಿಕ್ಕಿ ಅತ್ತರು.

ನಂತರ ಸಕಲವಾದ್ಯ ವೈಭವಗಳೊಂದಿಗೆ ಶ್ರೀಗಳವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಶ್ರೀಮಠದಿಂದ ಹೊರಟ ಮೆರವಣಿಗೆ ಪವಾರ ಕ್ರಾಸ್, ನಡುವಿನಪೇಟೆ, ಪುರಸಭೆ, ಸರಾಫ್ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌ ಬಜಾರ, ಅರಳಿಕಟ್ಟಿ, ಗುಗ್ಗರಿಪೇಟೆ, ರಂಜಂಗಳ ಪೇಟೆ ಮಾರ್ಗದ ಮೂಲಕ ಶ್ರೀಮಠಕ್ಕೆ ಬಂದು ತಲುಪಿತು.

ಸಂಜೆ ಐದು ಗಂಟೆಗೆ ಶ್ರೀಮಠದಲ್ಲಿ ಕಾಡಸಿದ್ದೇಶ್ವರ ಶ್ರೀಗಳವರ ಇಚ್ಛೆಯಂತೆ ವೀರಶೈವ ಲಿಂಗಾಯತ ಹಾಗೂ ಪಂಚಾಚಾರ್ಯರ ವಿಧಿವಿಧಾನಗಳಂತೆ ಕ್ರಿಯಾ ಸಂಸ್ಕಾರ ನಡೆಸಲಾಯಿತು.

ಶ್ರೀಗಳ ಅಂತ್ಯಕ್ರಿಯೆಯಲ್ಲಿ ಕೋಟೆಕಲ್ಲ ಹೊಳೆ ಹುಚ್ಚೇಶ್ವರ ಸ್ವಾಮೀಜಿ, ಮುರುಘಾಮಠದ ಕಾಶೀನಾಥ ಸ್ವಾಮೀಜಿ, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಮತಗಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಕುಂದರಗಿ ಮಠದ ಶ್ರೀಗಳು, ಇಂಗಳಗಿ ಮಠದ ಶ್ರಿಗಳು, ತೊರವಹಾಳ ಮಠದ ಶ್ರೀಗಳು, ಕೊಣ್ಣೂರ ಮಠದ ಶ್ರೀಗಳು, ಸಿದ್ದನಕೊಳ್ಳದ ಸಿದ್ದಾಶ್ರಮದ ಶ್ರೀಗಳು, ಬೈರನಟ್ಟಿ ಶ್ರೀಗಳು, ಅಮೀನಗಡದ ಶಂಕರರಾಜೇಂದ್ರ ಶ್ರೀಗಳು, ಇಳಕಲ್ಲ ಚಿತ್ತರಗಿಮಠದ ಗುರುಮಹಾಂತ ಸ್ವಾಮೀಜಿ ಪಾಲ್ಗೊಂಡಿದ್ದರು.

ಮಾಜಿ ಸಚಿವರಾದ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಬನ್ನಿ, ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತ ಗೌಡ ಪಾಟೀಲ, ಹೊಳಬಸು ಶೆಟ್ಟರ, ಮಹಾಂತೇಶ ಮಮದಾಪುರ, ಸಂಜಯ ಬರಗುಂಡಿ. ಪಿ.ಬಿ. ಹಳ್ಳೂರ, ಮಹೇಶ ಹೊಸಗೌಡರ, ಜಂಗಮ ಸಮಾಜದ ಅಧ್ಯಕ್ಷ ಶಿವಾನಂದ ಮಳಿಮಠ, ಎಂ.ಬಿ. ಹಂಗರಗಿ, ಹೊನ್ನಪ್ಪ ಗೌಡ ಗೌಡರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT