ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ ಡಿವೈಸ್ ಬಳಸಿ ನಕಲಿಗೆ ಯತ್ನಿಸುತ್ತಿದ್ದ ಅಭ್ಯರ್ಥಿ ಬಂಧನ

Last Updated 23 ನವೆಂಬರ್ 2020, 6:13 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರದಲ್ಲಿ ಭಾನುವಾರ ನಡೆದ ಕೆಎಸ್ಆರ್‌ಪಿ ಕಾನ್ ಸ್ಟೆಬಲ್ ನೇಮಕದ ಲಿಖಿತ ಪರೀಕ್ಷೆಯಲ್ಲಿ ಮಾಸ್ಕ್ ಒಳಗೆ ಎಲೆಕ್ಟ್ರಾನಿಕ್ ಸಾಧನ (ಡಿವೈಸ್) ಅಳವಡಿಸಿ ಅದರ ಮೂಲಕ ಕಾಪಿ ಮಾಡಲು ಮುಂದಾದ ಅಭ್ಯರ್ಥಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಇಲ್ಲಿನ ವಿದ್ಯಾಗಿರಿಯ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಕೇಂದ್ರದಲ್ಲಿ ಪರೀಕ್ಷೆ ಬರೆದ ಜಮಖಂಡಿ ತಾಲ್ಲೂಕು ಮೈಗೂರಿನ ಶ್ರೀಮಂತ ಭೂಪಾಲ ಸದಲಗಿ ಬಂಧಿತ ಆರೋಪಿ.

ಬ್ಲಾಕ್ ನಂ 164ರಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಶ್ರೀಮಂತ ಸದಲಗಿ ಮಾಸ್ಕ್ ಮೂಲಕ ಕಿವಿಯೊಳಗೆ ಸಾಧನ ಅಳವಡಿಸಿಕೊಂಡಿರುವುದು ಕಂಡು ಅನುಮಾನಗೊಂಡ ಪರೀಕ್ಷಾ ಕೊಠಡಿ ಮೇಲ್ಚಿಚಾರಕರು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವೇಳೆ ತಪಾಸಣೆ ನಡೆಸಿದಾಗ ಎಲೆಕ್ಟ್ರಾನಿಕ್ ಡಿವೈಸ್ ನ ಸಹಾಯದಿಂದ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಕಂಡುಬಂದಿದೆ. ಶ್ರೀಮಂತ ಸದಲಗಿಯನ್ನು ಕೂಡಲೇ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.

ನವನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ನಕಲು ಮಾಡಲು ನೆರವಾದವರ ಪತ್ತೆಗೂ ಬಲೆ ಬೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT