ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ ಶಿವಯೋಗಿ ಪ್ರಶಸ್ತಿ ಪ್ರದಾನ

Published 20 ಜುಲೈ 2023, 13:03 IST
Last Updated 20 ಜುಲೈ 2023, 13:03 IST
ಅಕ್ಷರ ಗಾತ್ರ

ಕೆರೂರ: ಸಮೀಪದ ಹೂಲಗೇರಿ ಗ್ರಾಮದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮಠದ ಸಂಸ್ಥಾಪಕ ಪೀಠಾಧಿಕಾರಿ ಶ್ರೀ ವೀರಯ್ಯ ಶ್ರೀಗೆ ಧಾರವಾಡದ ರಂಗಾಯಣ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವ ಶರಣ ಕಾಯಕ ಶಿವಯೋಗಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಗ್ರಾಮದ ಹೊರ ಭಾಗದಲ್ಲಿ ಸ್ವಂತ ಹಣದಿಂದ ಭೂಮಿ ಖರೀದಿಸಿ, ಅಲ್ಲಿ ಭಕ್ತರ ಸಹಕಾರದಿಂದ ಹೊಸ ಮಠ, ದೇವಾಲಯಗಳನ್ನು ಕಟ್ಟಿಸಿ, ಅಲ್ಲಿ ನೂರಾರು ಗಿಡಮರಗಳನ್ನು ಬೆಳೆಸಿ ಅವುಗಳನ್ನು ಪಾಲನೆ ಮಾಡಿ ತಾವಿರುವ ಸ್ಥಳವನ್ನು ಸಸ್ಯಕಾಶಿಯನ್ನಾಗಿ ಮಾಡಿದ್ದಾರೆ.

ಸಸ್ಯ ಕೃಷಿ ಜತೆಗೆ ಸಾಹಿತ್ಯ ಕೃಷಿ ಮಾಡಿದ ಅವರ ಸಾಧನೆಯನ್ನು ಪರಿಗಣಿಸಿ ಹುಬ್ಬಳ್ಳಿಯ ವಿಶ್ವದರ್ಶನ ಹಾಗೂ ಕರ್ನಾಟಕ ಪ್ರಜಾದರ್ಶನ ದಿನಪತ್ರಿಕೆಗಳ ಸಂಪಾದಕ ಎಸ್.ಎಸ್. ಪಾಟೀಲ ಅವರು ಈ ಪ್ರಶಸ್ತಿ ನೀಡಿ ಗೌರವಿದ್ದಾರೆ.

ಮಠದ ಉತ್ತರಾಧಿಕಾರಿ ಸಿದ್ದವೀರ ಸ್ವಾಮೀಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT