ಕೆರೂರ: ಅಖಿಲ ಭಾರತ ದೇವಾಂಗ ಜಗದ್ಗುರು ದಯಾನಂದಪುರಿ ಮಹಾಸ್ವಾಮಿಗಳ 36ನೇ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ದೇವಾಂಗ ಜ್ಯೋತಿ ರಥವನ್ನು ಪಟ್ಟಣದಲ್ಲಿ ಸೋಮವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಮೇ 8 ಮತ್ತು 9ರಂದು ಬಾದಾಮಿ ತಾಲ್ಲೂಕಿನ ಬನಶಂಕರಿಯಲ್ಲಿ ನಡೆಯಲಿರುವ ಪೂಜ್ಯರ ಪಟ್ಟಾಭಿಷೇಕ ಹಾಗೂ ದೇವಾಂಗ ಜಾಗೃತಿ ಸಮಾವೇಶಕ್ಕೆ ಸಮಾಜ ಭಾಂದವರಲ್ಲಿ ಜಾಗೃತಿ ಮೂಡಿಸಲು ದೇವಾಂಗ ಜ್ಯೋತಿ ರಥವು ಪಟ್ಟಣಕ್ಕೆ ಆಗಮಿಸಿತು. ರಥಕ್ಕೆ ದೇವಾಂಗಮಠದ ಮುದ್ದಸಂಗ ಸ್ವಾಮೀಜಿ ಹಾಗೂ ಸಮಾಜ ಭಾಂದವರು ಪೂಜೆ ಸಲ್ಲಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವಾಂಗ ಜ್ಯೋತಿ ರಥವು ಸಂಚರಿಸಿ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಪ್ರಚಾರವನ್ನು ಪೂರ್ಣಗೊಳಿಸಿತು.

ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ,ಯಂಕಣ್ಣ ಗುಡಿಸಾಗರ,ಶಿವಪ್ಪ ಹೆಬ್ಬಳ್ಳಿ,ಶ್ರೀಕಾಂತ ಪರದೇಶಿ,ಮಲ್ಲಪ್ಪ ಗದ್ದನಕೇರಿ, ಸುರೇಶ ಜಾಲಿಹಾಳ,ಪಾಂಡಪ್ಪ ಅಂಕದ,ವಿಷ್ಣು ಅಂಕದ, ಮಹೇಶ ಮುಗಳಿ,ಶಂಕ್ರಪ್ಪ ಗದಗಿನ, ವಿಠ್ಠಲ ಸಣ್ಣಕ್ಕಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-19-1782065594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.