ಕೆರೂರ: ಒಂಬತ್ತು ವರ್ಷಗಳ ಬಳಿಕ ನಡೆಯುತ್ತಿರುವ ಪಟ್ಟಣದ ಗ್ರಾಮ ದೇವತೆಗಳ ಜಾತ್ರೆಗೆ ಕೆರೂರಿನ ಜನರು ಸಜ್ಜಾಗಿದ್ದು, ಏ.29 ರಂದು ಗ್ರಾಮದೇವತೆಗಳ ರಥೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.

ಜಾತ್ರೆಗೆ ಬೃಹತ್ ರಥವು ಸಿದ್ದವಾ ಗಿದ್ದು, ಬೆಳಿಗ್ಗೆ ದೇವಸ್ಥಾನದಲ್ಲಿ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರಿಗೆ ವಿಶೇಷ ಪೂಜೆ, ಹೋಮ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಈ ಹಿಂದೆ ಸುಮಾರು ಒಂಬತ್ತು ವರ್ಷಗಳ ಹಿಂದೆ 2017ರಲ್ಲಿ ಪಟ್ಟಣದ ಗ್ರಾಮ ದೇವತೆಗಳ ರಥೋತ್ಸವವು ಅತ್ಯಂತ ಸಂಭ್ರಮದಿಂದ ಜರಗಿತ್ತು. ಈ ಜಾತ್ರೆಯು ಪಟ್ಟಣದ ಎಲ್ಲ ಸಮುದಾಯದ ಜನರು ಕೂಡಿಕೊಂಡು ಆಚರಿಸುವುದು ಒಂದು ವಿಶೇಷವಾಗಿದೆ.

ಏ.21 ರಂದು ಗುಳೆದ ಲಕ್ಕಮ್ಮ ಜಾತ್ರೆ ಮಾಡುವ ಮೂಲಕ ಜಾತ್ರಾ ಮಹೋ ತ್ಸವದ ಕಾರ್ಯಕ್ರಮಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಏ.29 ರಂದು ಗ್ರಾಮ ದೇವತಗಳಾದ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವಿಯರ ಮೆರವಣಿಗೆ ದೇವಸ್ಥಾನ ಗರ್ಭಗುಡಿಯಿಂದ ಹೊರಟು ಪಟ್ಟಣದ ರಾಜ ಬೀದಿಗಳಲ್ಲಿ ಸಂಚರಿಸಿ ಎ.ಆರ್.ಹಿರೇಮಠ ಹೈಸ್ಕೂಲ್ ಆವರಣದಲ್ಲಿ ಸ್ಥಾಪಿಸಿರುವ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳುವುದು, ಸಂಜೆ 4.30ಕ್ಕೆ ಮಹಾರಥೋತ್ಸವವು ನಡೆಯಲಿದೆ.

ಒಂಬತ್ತು ವರ್ಷಗಳ ಬಳಿಕ ನಡೆಯುತ್ತಿರುವ ಗ್ರಾಮ ದೇವತಗಳ ಜಾತ್ರೆಯು ಪಟ್ಟಣದಲ್ಲಿ ಹಬ್ಬದ ವಾತಾ ವರಣ ನಿರ್ಮಾಣವಾಗಿದೆ,

ಜಾತ್ರೆಯ ಅಂಗವಾಗಿ ಪಟ್ಟಣದ ಜನರು ತಮ್ಮ ತಮ್ಮ ಮನೆಗಳಿಗೆ ಸುಣ್ಣ-ಬಣ್ಣಗಳನ್ನು ಬಳೆದ ಶೃಂಗಾರಗೊಳಿಸಿದ್ದಾರೆ.

ಜಾತ್ರೆ ವಿಶೇಷ: ಈ ಬಾರಿ ಜಾತ್ರಾ ವಿಶೇಷವಾಗಿ ಗ್ರಾಮ ದೇವತೆಗಳಿಗೆ ರಥೋತ್ಸವ ದಿನದಂದು ಹೆಲಿಕಾಪ್ಟರ್ ಹಾಗೂ ಗಜರಾಜನ (ಆನೆ) ಮೂಲಕ ಪುಷ್ಪಾರ್ಚನೆ ನಡೆಯಲಿದೆ, ಜಾತ್ರೆಯಲ್ಲಿ ವಿವಿಧ ಬಗೆಯ ಮಂಗಲವಾದ್ಯ, ಕುದುರೆ ಕುಣಿತ, ಹಲಗಿ ಮೇಳ ಜರುಗಲಿದೆ.

ಪಟ್ಟಣದ ಗಾಯಕ ವೆಂಕಟೇಶ ಮೂರ್ತಿ ಶಿರೂರ ಅವರ ನೇತೃತ್ವದಲ್ಲಿ ನಾಡಿನ ಹೆಸರಾಂತ ಕಲಾವಿದರಿಂದ ಏ.29 ಹಾಗೂ ಏ.30 ರಂದು ಎರಡು ದಿನಗಳು ರಸಮಂಜರಿ ನಡೆಯಲಿದೆ.

ಮೇ1 ರಂದು ಗ್ರಾಮ ದೇವತೆಗಳಿಗೆ ಪಟ್ಟಣದ ಎಲ್ಲ ಜನರು ನೈವೇದ್ಯ ಕೊಟ್ಟು ಇಷ್ಟಾರ್ಥ ಹರಕೆಗಳನ್ನು ನೆರವೇರಿಸುವ ಕಾರ್ಯ ನಡೆಯಲಿದೆ,

ಮೇ.2 ರಂದು ಸಾಯಂಕಾಲ 4 ಗಂಟೆಗೆ ಕರಬಾನ ಮಡಿಕೆ ಕಾರ್ಯಕ್ರಮ ಜರುಗಲಿದೆ.

ಮೇ.5 ರಂದು ಪುನಃ ಗ್ರಾಮ ದೇವತೆ ಯರಿಗೆ ಉಡಿ ತುಂಬುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ.

ಪಟ್ಟಣದಲ್ಲಿ ಸಂಭ್ರಮ ಮನೆ ಮಾಡಿದ್ದು, ದ್ಯಾಮಮ್ಮ ಹಾಗೂ ದುರ್ಗಮ್ಮ ದೇವತೆಯರು ಭಕ್ತರ ಇಷ್ಟಾರ್ಥ ಸಿದ್ದಿಗಳನ್ನು ನೇರವೇರಿಸಿಲಿ, ಒಳ್ಳೆಯ ಮಳೆ- ಬೆಳೆ ನೀಡಿ ನಾಡಿಗೆ ಒಳಿತು ಮಾಡಲಿ
ಮಹೇಶ ಮುಗಳಿ, ಸ್ಥಳೀಯ ಅಡತಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.