ಕೆರೂರ: ಪಟ್ಟಣದಲ್ಲಿ ಭಾನುವಾರ ಸಂಜೆ ಆಲಿಕಲ್ಲು ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ಕಳೆದ ಒಂದು ವಾರದಿಂದ ಬಿಸಿಲ ಸೆಕೆಯಿಂದ ಬೆಂದಿದ್ದ ಜನರಿಗೆ ಖುಷಿಯಾಯಿತು. ಮಳೆ ರಭಸಕ್ಕೆ ರಸ್ತೆ ಮೇಲೆ ಚರಂಡಿ ನೀರು ತುಂಬಿ ಹರಿದವು.

ಬಿರುಸಿನ ಗಾಳಿ ಬೀಸಿದ ಪರಿಣಾಮ ಯಂಕಂಚಿ, ಮತ್ತಕಟ್ಟಿ ಗ್ರಾಮದ ರಸ್ತೆಗಳಲ್ಲಿ ಗಿಡಗಳು ನೆಲಕ್ಕುರುಳಿ, ವಾಹನ ಸಂಚಾರದಲ್ಲಿ ಕೆಲ ಹೊತ್ತು ತೊಂದರೆ ಉಂಟಾಯಿತು.

ಭಾರಿ ಗಾಳಿ ಹಾಗೂ ಮಳೆಯಿಂದ ಪಟ್ಟಣದಲ್ಲಿ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.

ಹುನಗುಂದ ವರದಿ: ನಗರವು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ಸಂಜೆ ಗುಡುಗು, ಸಿಡಿಲುಗಳ ಆರ್ಭಟದೊಂದಿಗೆ ತುಂತುರು ಮಳೆ ಆಗಿದೆ.

ಮಧ್ಯಾಹ್ನದಿಂದ ಬಿಸಿಲಿನ ತಾಪದ ಜೊತಗೆ ಸೆಕೆಯೂ ಹೆಚ್ಚಾಗಿತ್ತು. ಗಾಳಿ ರಭಸಕ್ಕೆ ಕೆಲವು ಕಡೆ ಮರದ ಟೊಂಗೆಗಳು ನೆಲಕ್ಕುರುಳಿವೆ.

ನಗರದ ಹೊರ ವಲಯದಲ್ಲಿರುವ ಕೈಗಾರಿಕೆ ಪ್ರದೇಶ ಹಾಗೂ ಘಟ್ಟಿಗನೂರು ಗ್ರಾಮಗಳಲ್ಲಿ ತಲಾ ಎರಡು ಕಂಬಗಳು ಧರೆಗೆ ಉರುಳಿವೆ. ಕೆಲವು ಗ್ರಾಮಗಳಲ್ಲಿ ಸುಮಾರು ಎರಡು ಗಂಟೆ ವಿದ್ಯುತ್ ವ್ಯತ್ಯಯ ಉಂಟಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-19-199718553

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.