ಕೆರೂರ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ನಿಮಿತ್ತ ಶನಿವಾರ ಪಟ್ಟಣದಲ್ಲಿ ಗಣವೇಷದಾರಿಗಳಿಂದ ಪಥಸಂಚಲನ ನಡೆಯಿತು.

ಭಗವಾಧ್ವಜಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಭಕ್ತಿ ಗೀತೆಯೊಂದಿಗೆ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು. ಶತಮಾನೋತ್ಸವದ ಹಿನ್ನೆಲೆಯಲ್ಲಿ ನಡೆದ ಪಥಸಂಚಲನವು ಪಟ್ಟಣದಲ್ಲಿ ಹಬ್ಬದ ವಾತಾವರಣವನ್ನು ಉಂಟುಮಾಡಿತ್ತು. 600 ಕ್ಕೂ ಹೆಚ್ಚು ಗಣವೇಷದಾರಿಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದರು.

ಪಟ್ಟಣದ ವಿದ್ಯಾವರ್ಧಕ ಸಂಘದ ಅ.ರಾ.ಹಿರೇಮಠ ಪ್ರೌಢಶಾಲಾ ಮೈದಾನದಿಂದ ಆರಂಭಗೊಂಡ ಪಥಸಂಚಲನವು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿ, ಪಟ್ಟಣದ ಪ್ರಮುಖ ರಸ್ತೆಗಳಾದ ತರಕಾರಿ ಮಾರುಕಟ್ಟೆ, ಮತ್ತಿಕಟ್ಟಿ ಓಣಿ, ರಾಚೋಟೇಶ್ವರ ದೇವಸ್ಥಾನ, ಸರ್ಕಾರಿ ಚವಡಿ, ಅಂಬೇಡ್ಕರ್ ವೃತ್ತ, ಕೀಲ್ಲಾ ಪೇಟೆ, ಮ್ಯಾಗಡಿ ಓಣಿ, ಬನಶಂಕರಿದೇವಿ ದೇವಸ್ಥಾನ, ಪತ್ತಾರಕಟ್ಟಿ ಹೀಗೆ ಸಂಚರಿಸಿ ಮರಳಿ ಮೈದಾನ ಸೇರಿತು.

ಮುಖ್ಯ ವಕ್ತಾರರಾಗಿ ಆಗಮಿಸಿದ ರಾಮಚಂದ್ರ ಎಡಕೆ ಮಾತನಾಡಿ, ‘ಇಂದು ನಾವು ಸಂಘದ ಶತಮಾನೋತ್ಸವದೊಂದಿಗೆ, ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಅನೇಕ ಕವಿಗಳು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಮಮ್ಮಿ ಎಂಬ ಪದ ಬಳಸದೆ ನಾವು ಅಮ್ಮ ಎಂಬ ಪದವನ್ನು ಬಳಸಿ ಕನ್ನಡವನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ’ ಎಂದು ಹೇಳಿದರು.

ರೋಣದ ಬೂದಿಶ್ವರ ಮಠದ ವಿಶ್ವನಾಥ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾರ್ಗದರ್ಶನದಲ್ಲಿ ಸೂಕ್ತ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.