ಶುಕ್ರವಾರ, ಆಗಸ್ಟ್ 6, 2021
27 °C

ಗಬ್ಬೆದ್ದು ನಾರುತ್ತಿದೆ ಕೋಡಿ ಕಾಲುವೆ- ಸ್ವಚ್ಛಗೊಳಿಸಲು ಕೆರೂರು ನಿವಾಸಿಗಳ ಒತ್ತಾಯ

 ಪ್ರಭು ಎಂ. ಲಕ್ಷೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಕೆರೂರ: ಇಲ್ಲಿನ ಕೆರೆಗೆ ಕೋಡಿ ಬಿದ್ದು ಹರಿವ ನೀರಿನ ಕಾಲುವೆಯು ಇಂದು ದೊಡ್ಡ ಚರಂಡಿಯಾಗಿ ಮಾರ್ಪಟ್ಟಿದೆ.

ವಿವಿಧ ಬಗೆಯ ತ್ಯಾಜ್ಯದಿಂದ ಕಾಲುವೆ ಮಲಿನ ತಾಣವಾಗಿದೆ. ವಿಪರೀತ ಸೊಳ್ಳೆಗಳ ಹಾವಳಿ, ಸದಾ ದುರ್ನಾತ ಹರಡುವ ಚರಂಡಿಯ ಸುತ್ತಮುತ್ತ ವಾಸಿಸುವ ನಿವಾಸಿಗಳು, ವಾಣಿಜ್ಯ ಮಳಿಗೆಗಳ ವರ್ತಕರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಪಟ್ಟಣದ ಕೆರೆಯಿಂದ ಆರಂಭವಾಗುವ ಈ ಕಾಲುವೆ ಚರಂಡಿ ಕೋಡಿ ಯಲ್ಲಮ್ಮನ ಗುಡಿ ಬಳಿಯಿಂದ ಕಂದಕೂರ ಪ್ಲಾಟ್,  ಗಡಗಡೆಯ ಬಾವಿ, ಲಕ್ಷ್ಮೀ ನಗರ ಮತ್ತು ಬಸ್ ನಿಲ್ದಾಣ ಪ್ರದೇಶದ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿ ಸಾಗಿ ಹೋಗುತ್ತದೆ.

ಕಾಲುವೆ ಪಕ್ಕ ವಾಸಿಸುವ ಗ್ರಾಮಸ್ಥರು ಪ್ರತಿನಿತ್ಯ ಸದಾ ದುರ್ನಾತದಿಂದ ಮೂಗು ಮುಚ್ಚಿಕೊಂಡೇ, ರೋಗಗಳ ಭೀತಿಯಿಂದ ಬದುಕಬೇಕಾಗಿದೆ. ಸುತ್ತಲಿನ ವ್ಯಾಪಾರಸ್ಥರು ಹಾಗೂ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಹೋಟೆಲ್, ಖಾನಾವಳಿ ಗ್ರಾಹಕರು ಬೇಸತ್ತು ಹೋಗಿದ್ದಾರೆ.

ಕಾಲುವೆ ನೀರಿನ ಮಾಲಿನ್ಯದಿಂದ ನಮಗೆ ಸಾಕಾಗಿ ಹೋಗಿದೆ. ಇಲ್ಲಿ ವಾಸಿಸುವವರು ಡೆಂಗಿ, ಮಲೇರಿಯಾ, ಚಿಕುನ್‌ಗುನ್ಯಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆಸ್ಪತ್ರೆಗಳಿಗೆ ಹಣ ಸುರಿದು ಬೇಸತ್ತಿದ್ದೇವೆ. ನಮ್ಮ ಸಮಸ್ಯೆ ಪರಿಹರಿಸಲು ಸಂಬಂಧಿಸಿದವರು ಮುಂದಾಗಬೇಕು ಎಂದು ಸ್ಥಳೀಯರಾದ ನಿಂಗಪ್ಪ ಬಡಿಗೇರ ಒತ್ತಾಯಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು