ಕೊಲ್ಹಾರ: ಊರು ಮುಳಗಡೆಯಾಗಿ ಪುನರ್ವಸತಿ ಕೇಂದ್ರದಲ್ಲಿ ನೆಲೆನಿಂತು ಇಪ್ಪತ್ತೈದು ವರ್ಷಗಳು ಗತಿಸಿದರೂ ಸಂತ್ರಸ್ತರು ಸ್ವಂತ ಸೂರು ಕಟ್ಟಿಕೊಳ್ಳಲು ನಿವೇಶನಕ್ಕಾಗಿ ಅಲೆದಾಡುವುದನ್ನು ತಪ್ಪಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕ್ಷೇತ್ರದ ಶಾಸಕ ಸಚಿವ ಶಿವಾನಂದ ಪಾಟೀಲ, ಸಂಬಂಧಪಟ್ಟ ಇಲಾಖೆಗೆ ಕ್ರಮಕೈಗೋಳ್ಳಲು ಆದೇಶ ಮಾಡಬೇಕು ಎಂದು ಕೊಲ್ಹಾರ ಪಟ್ಟಣ ಅಭಿವೃದ್ಧಿ ಹಿತಚಿಂತಕರ ವೇದಿಕೆಯ ರಾಮಣ್ಣ ಉಪ್ಪಲದಿನ್ನಿ, ವೀರಭದ್ರಪ್ಪ ಬಾಗಿ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುನರ್ವಸತಿ ಇಲಾಖಾ ಅಧಿಕಾರಿಗಳು ಮಧ್ಯವರ್ತಿಗಳ ಜೊತೆ ಸೇರಿ ಅವರು ಮಾಡಿದ ತಪ್ಪನ್ನು ಸಂತ್ರಸ್ತರ ಮೇಲೆ ಹೊರಿಸಿರುವುದು ಸರಿಯಲ್ಲಿ. ಮುಳುಗಡೆ ಸಂತ್ರಸ್ತರು ನಿವೇಶನದ ಹಕ್ಕುಪತ್ರ ಪಡೆದುಕೊಂಡು ಹಲವಾರು ವರುಷ ಕಳೆದಿವೆ. ಆದರೆ ಈಗ ಇ ಸ್ವತ್ತು ಉತಾರೆ ಪಡೆಯಲು ಪಟ್ಟಣ ಪಂಚಾಯತಿಗೆ ಅರ್ಜಿ ಸಲ್ಲಿಸಿದರೆ ನೂರಾ ಎಂಟು ತೊಡಕುಗಳು. ತಕ್ಷಣವೇ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ವಾರದಲ್ಲಿ ಎರಡು ದಿನ ಕೊಲ್ಹಾರ ಪಟ್ಟಣದ ಯುಕೆಪಿ ಕಾರ್ಯಲಯದಲ್ಲಿ ಸಿಬ್ಬಂದಿ ಸಹಿತವಾಗಿ ಆಗಮಿಸಿ ಆಗಿರುವ ತಪ್ಪನ್ನು ಸರಿಪಡಿಸಲು ಮುಂದಾಗಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂತ್ರಸ್ತರು ಅಲೆದಾಡುವದನ್ನು ತಪ್ಪಿಸಲು ಸಚಿವ ಶಿವಾನಂದ ಪಾಟೀಲರು ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಗೊಂದಲ ಸರಿಪಡಿಸಲು ಕ್ರಮಕೈಗೊಳ್ಳಬೇಕು. ಅಕ್ಟೋಬರ್ನೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು. ವೀರಭದ್ರಪ್ಪ ಬಾಗಿ, ರಾಮಣ್ಣ ಉಪ್ಪಲದಿನ್ನಿ, ತಿಪ್ಪಣ್ಣ ಕುದರಿ, ರಿಯಾಜ ಗಿರಗಾಂವಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-26-1626465702

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.