ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಘಟನೆ ಖಂಡಿಸಿ ವೈದ್ಯರ ಪ್ರತಿಭಟನೆ

Published 17 ಆಗಸ್ಟ್ 2024, 15:57 IST
Last Updated 17 ಆಗಸ್ಟ್ 2024, 15:57 IST
ಅಕ್ಷರ ಗಾತ್ರ

ಬಾಗಲಕೋಟೆ: ಕೋಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯ ಸ್ಥಳೀಯ ಘಟಕದಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಳಿಗ್ಗೆ ಜಿಲ್ಲಾಡಳಿತ ಭವನದ ಬಳಿ ಜಮಾಯಿಸಿದ ನೂರಾರು ವೈದ್ಯರು ಘಟನೆ ಖಂಡಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ಮನವಿ ಸಲ್ಲಿಸಿದರು. ನ್ಯಾಯ ಕೇಳಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಐಎಂಎ ಬಾಗಲಕೋಟೆ ಘಟಕದ ಅಧ್ಯಕ್ಷ ಡಾ.ಅರುಣ ಮಿಸ್ಕಿನ್, ‘ಘಟನೆ ನಡೆದ ದಿನವೇ ಪೊಲೀಸರು ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಸಾಕ್ಷ್ಯ ನಾಶಗೊಳಿಸುವ ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.

ಹಿರಿಯ ವೈದ್ಯರಾದ ಡಾ.ಗಿರೀಶ ಮಸೂರಕರ ಹಾಗೂ ಎಂ.ಎಸ್.ದಡ್ಡೇನವರ ಮಾತನಾಡಿ, ‘ಕೋಲ್ಕತ್ತಾ ಘಟನೆಯಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ವೈಫಲ್ಯಗಳು ಎದ್ದು ಕಾಣುತ್ತಿದೆ. ಪ್ರಕರಣದಲ್ಲಿ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ನೀಡುವುದನ್ನು ಬಿಟ್ಟು ಮಮತಾ ಬ್ಯಾನರ್ಜಿ ಇಲ್ಲಸಲ್ಲದ ರಾಜಕಾರಣ ಮಾಡುತ್ತಿದ್ದಾರೆ. ವೈದ್ಯ ಸಮೂಹಕ್ಕೆ ನ್ಯಾಯವೇ ಇಲ್ಲದಂತಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಕಾನೂನು, ಸುವ್ಯವಸ್ಥೆ ಸರಿಯಾಗುವಂತೆ ಮಾಡಬೇಕು. ಆಡಳಿತದಲ್ಲಿ ಇದ್ದವರು ಮಾನವೀಯತೆ ಮರೆತು ವರ್ತಿಸಿದರೆ ವೈದ್ಯರೂ ಅದೇ ನಿಲುವು ತಾಳುವ ದಿನ ಬರಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಐಎಂಎ ಕಾರ್ಯದರ್ಶಿ ಡಾ.ಪ್ರಮೋದ ಮಿರ್ಜಿ, ಡಾ.ಆರ್.ಟಿ.ಪಾಟೀಲ, ಡಾ.ಬಿ.ಎಸ್.ಮರೇಗುದ್ದಿ, ಡಾ.ಶೇಖರ ಮಾನೆ, ಡಾ. ಅಶೋಕ ಬಡಕಲಿ, ಡಾ.ಬಿ.ಎಸ್.ಪಾಟೀಲ, ಡಾ.ಆದಿತ್ಯ ಲಾಜಮಿ, ಡಾ.ಶಂಕರ ಪಾಟೀಲ, ಡಾ.ದೇವರಾಜ ಪಾಟೀಲ, ಡಾ.ಶೈಲೇಶ ಎಮ್ಮಿ, ಡಾ.ಶಿವಾನಂದ ಬಡದೇಸಾಯಿ, ಡಾ.ಕಿರಣ ಕಲಬುರಗಿ, ಡಾ.ಅರ್ಚನಾ ದಡ್ಡೇನ್ನವರ, ಡಾ.ಜಯಶ್ರೀ ತೇಲಸಂಗ, ಡಾ.ಉನೈಜಾ ಫರೀನ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕೋಲ್ಕೊತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಕೊಲೆ ಘಟನೆ ಖಂಡಿಸಿ ಶನಿವಾರ ಬಾಗಲಕೋಟೆ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೋಲ್ಕೊತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಕೊಲೆ ಘಟನೆ ಖಂಡಿಸಿ ಶನಿವಾರ ಬಾಗಲಕೋಟೆ ವೈದ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT