ಹುನಗುಂದ: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ (ಸಾಸ್) ರಾಜ್ಯ ಘಟಕದ ವತಿಯಿಂದ ತಾಲ್ಲೂಕಿನ ಕೂಡಲಸಂಗಮದ ಸಂಗಮೇಶ್ವರ ದೇವಸ್ಥಾನ ಆವರಣದ ಸಭಾಂಗಣದಲ್ಲಿ ಅಧಿಕ ಮಾಸದ ಅಂಗವಾಗಿ ಮೇ 31ರಂದು ರಾಜ್ಯ ಮಟ್ಟದ ಅಯ್ಯಪ್ಪ ಮಹಾಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ದತ್ತಾತ್ರೇಯ ಶಿಂತ್ರೆ ಹೇಳಿದರು.

ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಕಳೆದ 18 ವರ್ಷಗಳಿಂದ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೇ ಮೊದಲ ಬಾರಿಗೆ ತ್ರಿವೇಣಿ ಸಂಗಮದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಬೆಳಗಿನ ಜಾವ 4ಕ್ಕೆ ಗಣ ಹೋಮ, 6.30ಕ್ಕೆ ಅಯ್ಯಪ್ಪ ಲಕ್ಷಾರ್ಚನೆ, ಬೆಳಿಗ್ಗೆ 9.30 ಗಂಟೆಗೆ ಪೂರ್ಣ ಕುಂಭ ಮೆರವಣಿಗೆ, ಸಾಸ್ ಧ್ವಜಾರೋಹಣ, ಬೆಳಿಗ್ಗೆ 10.30ಕ್ಕೆ ಅಯ್ಯಪ್ಪ ಧರ್ಮ ಜಾಗೃತಿ ಸಭೆ ನಡೆಯಲಿದ್ದು, ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನಮಠದ ಗವಿಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಅನ್ನದಾನ ಸಮಿತಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಟಿ. ಬಿ. ಶೇಖರ ನೇತೃತ್ವ ವಹಿಸವರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ರಾಷ್ಟ್ರೀಯ ಉಪಾಧ್ಯಕ್ಷ ಆನಂದ ವಾಮನ ನಾಯಕ ಉದ್ಘಾಟಿಸುವರು. ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎನ್. ಜಯರಾಮ್ ಅಧ್ಯಕ್ಷತೆ ವಹಿಸುವರು. ರಾಜು ದೇಶಪಾಂಡೆ ಹಾಗೂ ಎಸ್.ಎನ್. ಕೃಷ್ಣಯ್ಯ ಅಯ್ಯಪ್ಪ ಧರ್ಮವಾಣಿ ನುಡಿಯುವರು. ರಮೇಶ ಮುಧೋಳ ಈರೋಡ್ ಎನ್. ರಾಜನ್, ನಾಯನಿ ಬಚಿರೆಡ್ಡಿ ವಿ.ಎಸ್.ಪ್ರಸಾದ, ಶಿವಾನಂದ ರಾಜೇಂದ್ರ ಅನ್ವೇಕರ್ ಅತಿಥಿಗಳಾಗಿ ಆಗಮಿಸುವರು.

ಸಂಜೆ 4 ಗಂಟೆಗೆ ತ್ರಿವೇಣಿ ಸಂಗಮ ಸ್ವಚ್ಛತೆ, ಸಂಜೆ 6 ಗಂಟೆಗೆ ತ್ರಿವೇಣಿ ಸಂಗಮದಲ್ಲಿ ಆರತಿ (ಗಂಗಾ ಆರತಿ ) ಹಾಗೂ ರಾತ್ರಿ 7 ಗಂಟೆಗೆ ಮಹಾ ಮಂಗಳಾರತಿ ಮತ್ತು ಹರಿವರಾಸನಂ ನಡೆಯಲಿದೆ ಎಂದರು. ಗುರುಸ್ವಾಮಿಗಳಾದ ರಮೇಶ ಮುಧೋಳ,ರಾಚಪ್ಪ ಕಾಜಗಾರ, ಮುತ್ತಣ್ಣ ಕಬ್ಬಿಣದ ಸಂಜಯ, ಮಲ್ಲಿಕಾರ್ಜುನ ಚೂರಿ ಅಖಂಡೇಶ್ವರ ಪತ್ತಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-19-1703422626

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.