ಕೂಡಲಸಂಗಮ: ನಾರಾಯಣಪುರ ಜಲಾಶಯ ಹಿನ್ನೀರಿನಿಂದ ಭಾದಿತವಾದ ಒಂಬತ್ತು ಪುನರ್ವಸತಿ ಕೇಂದ್ರಗಳಿಗೆ ನೀರು ಸರಬರಾಜು ಮಾಡುವ ವರಗೋಡದಿನ್ನಿ ಪುನರ್ವಸತಿ ಕೇಂದ್ರದಲ್ಲಿರುವ ಪಂಪ್ ಹೌಸ್, ನೀರು ಶುದ್ಧೀಕರಣ ಘಟಕ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಕಲುಷಿತ ನೀರು ಪೂರೈಕೆಯಾಗುತ್ತಿದೆ.

ಕೆಲವು ಪುನರ್ವಸತಿ ಕೇಂದ್ರಗಳಿಗೆ ಸಮರ್ಪಕ ನೀರು ಸರಬರಾಜು ಆಗಿಲ್ಲ. ಬಿಸನಾಳಕೊಪ್ಪ ಪುನರ್ ವಸತಿ ಕೇಂದ್ರಕ್ಕೆ ತಿಂಗಳಿನಿಂದ ನೀರು ಸರಬರಾಜು ಆಗುತ್ತಿಲ್ಲ, ನಿನ್ನೆ ಮಾತ್ರ ಬಂದಿದೆ. ಅಧಿಕಾರಿಗಳಿಗೆ ಕೇಳಿದರೆ ದುರಸ್ತಿ ಕಾರ್ಯ ನಡೆದಿದೆ ಎನ್ನುತ್ತಾರೆ ಸಂತ್ರಸ್ತರು.

ಹುನಗುಂದ ತಾಲ್ಲೂಕಿನ ಖಜಗಲ್, ವರಗೋಡದಿನ್ನಿ, ಕೆಂಗಲ್ ಕಡಪಟ್ಟಿ, ಬಿಸನಾಳಕೊಪ್ಪ ಭಾಗ-1, ಬಿಸನಾಳಕೊಪ್ಪ ಭಾಗ-2, ಇದ್ದಲಗಿ, ಕಮದತ್ತ, ಅಡಿಹಾಳ, ಎಮ್ಮೆಟ್ಟಿ ಪುನರ್ವಸತಿ ಕೇಂದ್ರದ ಸಂತ್ರಸ್ತರಿಗೆ ನೀರಿನ ಕೊರತೆ ಆಗಬಾರದು ಎಂದು ಸರ್ಕಾರ ಕೃಷ್ಣಾ ಮೇಲ್ದಡೆ ಯೋಜನೆಯ ಪುನರ್ ವಸತಿ ಪುನರ್ ನಿರ್ಮಾಣ ವಿಭಾಗದಿಂದ ಕೋಟ್ಯಂತರ ವೆಚ್ಚಮಾಡಿ ಕಟಗೂರ ಜಾಕ್ವೆಲ್ನಿಂದ ವರಗೋಡದಿನ್ನಿ ಪುನರ್ವಸತಿ ಕೇಂದ್ರದಲ್ಲಿ ಪಂಪ್ಹೌಸ್, ನೀರು ಶುದ್ಧೀಕರಣ ಘಟಕ ನಿರ್ಮಿಸಿದೆ.

ನೀರು ಶುದ್ಧೀಕರಣ, ಸರಬರಾಜು ಕಾರ್ಯವನ್ನು ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಸಮರ್ಪಕ ಸಿಬ್ಬಂದಿ ನಿಯೋಜಿಸದೇ ಇರುವುದರಿಂದ ಸಂತ್ರಸ್ತರ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಮೇಲ್ವಿಚಾರಣೆ, ಪರಿಶೀಲನೆ ಮಾಡಬೇಕಾದ ಪುನರ್ವಸತಿ ಪುನರ್ ನಿರ್ಮಾಣ ವಿಭಾಗದ ಅಧಿಕಾರಿಗಳು ಪರಿಶೀಲಿಸದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.

ಅಡವಿಹಾಳ, ಕಮದತ್ತ ಪುನರ್ವಸತಿ ಕೇಂದ್ರಗಳಿಗೆ ನೀರು ಸಬರಾಜು ಆಗುತ್ತಿಲ್ಲ ಎಂದು ಸಂತ್ರಸ್ತರು ದೂರಿದರು.

ಪಂಪ್ಹೌಸ್, ನೀರು ಶುದ್ಧೀಕರಣ ಘಟಕದಲ್ಲಿ ನೀರು ಕಲುಷಿತಗೊಂಡಿದೆ. ಕೆಲವು ಕಡೆ ಪಾಚ್ಚಿಕಟ್ಟಿದೆ, ಸ್ವಚ್ಛತೆ ಇಲ್ಲ. ಕೂಡಲೇ ನೀರಿನ ತೊಟ್ಟಿ ಸ್ವಚ್ಛಗೊಳಿಸಿ, ಶುದ್ಧ ನೀರು ಸಬರಾಜು ಮಾಡಬೇಕು. ಇಲ್ಲವಾದರೇ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹುನಗುಂದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಪ್ರವೀಣ ವಾಲಿಕಾರ ಎಚ್ಚರಿಸಿದರು.

ಪಂಪ್ಹೌಸ್, ನೀರು ಶುದ್ಧೀಕರಣ ಘಟಕ ಸ್ವಚ್ಛಗೊಳಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದೆ. ಎಲ್ಲ ಪುನರ್ವಸತಿ ಕೇಂದ್ರಗಳಿಗೆ ಸಮರ್ಪಕ ನೀರು ಪೂರೈಸುವಂತೆ ಸಿಬ್ಬಂದಿಗೆ ಸೂಚಿಸಿದೆ

-ರಾಮಪ್ಪ ರಾಠೋಡ, ಸಹಾಯಕ ಎಂಜನಿಯರ್, ಪುನರ್ ವಸತಿ ಪುನರ್ ನಿರ್ಮಾಣ ವಿಭಾಗ, ಆಲಮಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.