ಕೂಡಲಸಂಗಮ: ಕರಾವಳಿ, ಮಲೆನಾಡು, ಕೇರಳದ ಹಿನ್ನೀರು– ತೆಂಗಿನ ತೋಪು, ಗೋವಾದ ಬೀಚ್ ಮುಂತಾದ ಸ್ಥಳಗಳಿಗೆ ವಿವಾಹ ಪೂರ್ವ ಚಿತ್ರೀಕರಣಕ್ಕೆ (ಪ್ರಿ ವೆಡ್ಡಿಂಗ್ ಶೂಟ್) ತೆರಳುತ್ತಿದ್ದ ಜೋಡಿಗಳು ಕೆಲವು ದಿನಗಳಿಂದ ಕೂಡಲಸಂಗಮ ಅರಸಿ ಬರುತ್ತಿದ್ದಾರೆ.

ನಿತ್ಯ 5ರಿಂದ 10 ಜೋಡಿಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ಕೂಡಲಸಂಗಮದ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಎರಡು ವರ್ಷಗಳ ಹಿಂದೆ ಸೀಮಿತ ಸಂಖ್ಯೆಯಲ್ಲಿ ಶೂಟಿಂಗ್ಗೆ ಬರುತ್ತಿದ್ದರು; ಕಳೆದ ಒಂದು ವರ್ಷದ ಅವಧಿಯಲ್ಲಿ ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಇದೇ. ದೇವಾಲಯ ಆವರಣ ಚಿತ್ರೀಕರಣ ತಾಣವಾಗಿ ಮಾರ್ಪಟ್ಟಿದೆ.

ಬಾಗಲಕೋಟೆ, ವಿಜಯಪುರ, ಗದಗ, ರಾಯಚೂರ, ಯಾದಗಿರಿ, ವಿಜಯನಗರ, ಬಳ್ಳಾರಿ ಜಿಲ್ಲೆಯಿಂದ ಅಧಿಕ ಸಂಖ್ಯೆಯಲ್ಲಿ ಜೋಡಿಗಳು ಬರುತ್ತಿದ್ದಾರೆ. ದಕ್ಷಿಣ ಕರ್ನಾಟಕ, ಮಹಾರಾಷ್ಟ್ರದಿಂದಲೂ ಅನೇಕ ನವ ಜೋಡಿಗಳು ನಿತ್ಯ ಮರುತ್ತಾರೆ. ದರ್ಶನಕ್ಕೆ ಬಂದ ಭಕ್ತರು ಬೆರಗುಗಣ್ಣಿನಿಂದ ಶೂಟಿಂಗ್ ನೋಡುತ್ತಿದ್ದಾರೆ.

ಸಂಗಮೇಶ್ವರ ದೇವಾಲಯ ಮುಂಭಾಗ, ನದಿಯ ದಡ, ದೋಣಿ ವಿಹಾರ, ರಥದ ಮನೆ, ಬಸವಣ್ಣನ ಐಕ್ಯ ಮಂಟಪ ಬಳಿ ಇರುವ ಅರಳೆ ಮರದ ಸಾಲು, ದೇವಾಲಯ ಬಳಿಯ ಕಮಾನುಗಳ ಮೇಲ್ಭಾಗ, ಜಾತವೇದಮುನಿ, ಸಿದ್ದೇಶ್ವರ ದೇವಾಲಯದ ಮುಂಭಾಗ, ಸಭಾ ಭವನ, ಪೂಜಾವನ, ಹೆಲಿಪ್ಯಾಡ್ ರಸ್ತೆ ಬಳಿ ಇರುವ ಮರದ ಸಾಲು, ಬಸವ ಅಂತರರಾಷ್ಟ್ರೀಯ ಕೇಂದ್ರ, ಚಾಲುಕ್ಯ ಮಹಾದ್ವಾರದಿಂದ ದೇವಾಲಯದವರೆಗೆ ಇರುವ ದ್ವಿಪಥ ರಸ್ತೆ, ಕೂಡಲಸಂಗಮ– ಅಡವಿಹಾಳ ಸೇತುವೆಯು ಚಿತ್ರೀಕರಣಕ್ಕೆ ನೆಚ್ಚನ ತಾಣಗಳಾಗಿವೆ. ಕೂಡಲಸಂಗಮದಲ್ಲಿರುವ ವಾಡೆ ಮನೆಗಳಲ್ಲಿಯೂ ಶೂಟಿಂಗ್ ನಡೆಯುತ್ತದೆ.

ನದಿಯ ದಡ, ದೇವಾಲಯ ಆವರಣ, ರಸ್ತೆಯ ಬದಿಯ ಮರಗಳ ಸಾಲು, ದೋಣಿ ವಿಹಾರ, ಕಮಾನುಗಳ ಮೇಲ್ಭಾಗ ಛಾಯಾಗ್ರಾಹಕರಿಗೆ ನಿಸರ್ಗದ ಮುದ ನೀಡುತ್ತಿವೆ. ನವ ಜೋಡಿಗಳು ಸುಂದರ ವಾತಾವರಣಕ್ಕೆ ಮನಸೋತಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಅಧಿಕ ಸಂಖ್ಯೆಯ ಶೂಟಿಂಗ್ ನಡೆಯುತ್ತಿವೆ.

ಚಿತ್ರೀಕರಣಕ್ಕೆ ಬೆಲೆಬಾಳುವ ಕ್ಯಾಮೆರಾ, ಬೆಳಕಿನ ಸಲಕರಣೆ, ಮೇಕಪ್ ಮ್ಯಾನ್, ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೇಂದ್ರ, ಡ್ರೋನ್ ಕ್ಯಾಮೆರಾ, ಪೂಜಾ ಸಾಮಗ್ರಿ ಮುಂತಾದವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚಿತ್ರೀಕರಣಕ್ಕೆ 5ರಿಂದ 10 ಜನರ ತಂಡ, ಜೋಡಿಗಳ ಜೊತೆಯೂ ನಾಲ್ಕಾರು ಜನರು ಇರುತ್ತಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೂ ಅನುಕೂಲವಾಗಿದೆ.

‘ನದಿಯ ದಡ, ಕೂಡಲಸಂಗಮ– ಅಡವಿಹಾಳ್ ಸೇತುವೆ ಮೇಲೆ ಶೂಟಿಂಗ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಿ ವೆಡ್ಡಿಂಗ್ ಶೂಟ್ ಆಗುವುದು. ಜಿಲ್ಲೆಯ ತಾಣಗಳನ್ನು ಇತರರಿಗೆ ಪರಿಚಯಿಸಿದ್ದಂತಾಗುತ್ತದೆ ಎಂದು ಆದಪ್ಪ ಗೊರಚಿಕ್ಕನವರ ಹೇಳಿದರು.

ಕೂಡಲಸಂಗಮ ಪ್ರಿ ವೆಡ್ಡಿಂಗ್ ಶೂಟ್ಗೆ ಉತ್ತಮ ಸ್ಥಳ. ನಮ್ಮ ನೆಲವನ್ನು ಇತರರಿಗೆ ಪರಿಚಿಸಿದಂತಾಗುವುದು. ಸದಾ ಸ್ಮರಣೀಯವಾಗಿರುತ್ತದೆ. ನಾನು ಕೂಡಲಸಂಗಮದಲ್ಲಿಯೇ ಶೂಟ್ ಮಾಡಿಸಿಕೊಂಡಿದ್ದೇನೆ
ಆದಪ್ಪ ಗೊರಚಿಕ್ಕನವರ, ಕೂಡಲಸಂಗಮ

ಮೂರು ತಿಂಗಳಲ್ಲಿ 155 ಶೂಟಿಂಗ್

ಪ್ರಿ ವೆಡ್ಡಿಂಗ್ ಶೂಟಿಂಗ್ಗೆ ₹500 ಶುಲ್ಕ ನಿಗದಿಪಡಿಸಲಾಗಿದೆ. ಡ್ರೋನ್ ಬಳಸಿದರೆ ₹1 ಸಾವಿರ ಪಾವತಿಸಬೇಕು. ಜನವರಿಯಿಂದ ಇದುವರೆಗೆ 155 ಪ್ರಿ ವೆಡ್ಡಿಂಗ್ ಶೂಟಿಂಗ್ ನಡೆದಿವೆ. ಕಳೆದ ಎರಡು ದಿನಗಳಲ್ಲೇ 8–10 ಶೂಟಿಂಗ್ ಆಗಿವೆ ಎನ್ನುತ್ತಾರೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಯ ಅಧಿಕಾರಿಯೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.