ಕೂಡಲಸಂಗಮ: ಸಂಗಮೇಶ್ವರ ಜಾತ್ರೆ ನಿಮಿತ್ತ ಮೂರು ದಿನಗಳ ಕಾಲ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತರು ಪಾಲ್ಗೊಳ್ಳಬೇಕು ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ವಿಜಯಕುಮಾರ ಆಚೂರ ಹೇಳಿದರು.

ಭಾನುವಾರ ರಾತ್ರಿ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಒಂದು ದಿನ ಶರಣ ವೈಭವ, ಎರಡು ದಿನ ವಚನ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಚನ ಪಠಣ, ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಭಕ್ತರು ಭಾಗವಹಿಸಬಹುದು’ ಎಂದರು.

ತಹಶೀಲ್ದಾರ್ ಜೆ.ಎಸ್. ಚಿನಿವಾಲರ, ಬೆಂಗಳೂರು ನವ್ಯ ನಾಟ್ಯ ಸಂಗಮದ ಶ್ರೀನಾಥ, ವಿಜಯಕುಮಾರ ಕೋಟೂರ, ಕಪ್ಪಯ್ಯ ಯಡಹಳ್ಳಿಮಠ, ಶಿಕ್ಷಕ ಪಿ.ಆರ್. ಗಣಾಚಾರಿ ಇದ್ದರು. ಗುರಗುಂಟಾ ಗ್ರಾಮದ ನಾಗರಾಜ ಪಟ್ಟನಶೆಟ್ಟಿ ಸಂಗಮೇಶ್ವರ ರಥೋತ್ಸವ ದಿನದಂದು ಆಗಮಿಸುವ ಭಕ್ತರಿಗೆ ಹುಗ್ಗಿ ಪಾಯಸ ಮಾಡಿಸಲು ₹ 50 ಸಾವಿರ ಕಾಣಿಕೆಯನ್ನು ತಹಶೀಲ್ದಾರ ಜೆ.ಎಸ್. ಚಿನಿವಾಲರ ಅವರಿಗೆ ನೀಡಿದರು. ಕಾಣಿಕೆ ನೀಡಿದ ನಾಗರಾಜ ಅವರನ್ನು ಮಂಡಳಿಯಿಂದ ಸನ್ಮಾನಿಸಲಾಯಿತು. ಬೆಂಗಳೂರು ನವ್ಯ ನಾಟ್ಯ ಸಂಗಮ ಕಲಾ ತಂಡದಿಂದ ಶರಣ ವೈಭವ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-19-319486248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.