ಬಾಗಲಕೋಟೆ: ರಾಜ್ಯದ ಸಾಂಸ್ಕೃತಿಕ ನಾಯಕ ಬಸವೇಶ್ವರರ ಜಯಂತಿಯನ್ನು ಸೋಮವಾರ ಎಲ್ಲೆಡೆ ಆಚರಿಸಲಾಗಿದೆ. ಆದರೆ, ಬಸವಣ್ಣವರ ವಿದ್ಯಾಕಾಶಿ, ಐಕ್ಯಸ್ಥಳ ಕೂಡಲಸಂಗಮದ ಅಭಿವೃದ್ಧಿ ಮಾತ್ರ ಮಂದಗತಿಯಲ್ಲಿ ಸಾಗಿದೆ.

2018ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ₹139 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ, ಸರಿಯಾದ ಯೋಜನೆ ಇಲ್ಲದ್ದರಿಂದ ಹಲವು ಅಭಿವೃದ್ಧಿ ಕಾರ್ಯಗಳು ಇಂದಿಗೂ ಪೂರ್ಣಗೊಂಡಿಲ್ಲ. ದೆಹಲಿಯ ಅಕ್ಷರಧಾಮ ಮಾದರಿಯ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ಕಾಮಗಾರಿ ಹಲವು ವರ್ಷಗಳಿಂದ ನಡೆದಿದ್ದರೂ ಪೂರ್ಣಗೊಂಡಿಲ್ಲ.

ಆಧುನಿಕ ತಂತ್ರಜ್ಞಾನದ ಮೂಲಕ ಬಸವಾದಿ ಶರಣರ ವಿಚಾರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಬೇಕು ಎಂಬ ಉದ್ದೇಶದಿಂದ 1998ರಲ್ಲಿ ₹15.5 ಕೋಟಿ ವೆಚ್ಚದಲ್ಲಿ ಬಸವ ಅಂತರರಾಷ್ಟ್ರೀಯ ಕೇಂದ್ರದ ಕಾಮಗಾರಿ ಆರಂಭಗೊಂಡಿತು. ಕುಂಟುತ್ತಾ ಸಾಗಿದ ಕಾಮಗಾರಿ ಎಂಟು ವರ್ಷಗಳ ನಂತರ, 2006ರಲ್ಲಿ ಮುಕ್ತಾಯಗೊಂಡಿತು. ಏಳು ಅಂತಸ್ತಿನ ಈ ಕಟ್ಟಡದಲ್ಲಿ ಏನು ಮಾಡಬೇಕು ಎಂಬುದಕ್ಕೆ ಸಮಿತಿ ರಚಿಸಲಾಯಿತು. ಆ ಸಮಿತಿಯು 2011ರಲ್ಲಿ ವರದಿ ನೀಡಿದೆ. ಆದರೆ, ಅನುಷ್ಠಾನವಾಗಿಲ್ಲ.

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಸರ್ಕಾರ ಬಸವ ಅಂತರರಾಷ್ಟ್ರೀಯ ಕೇಂದ್ರದ ಯೋಜನೆ ಹಳೆಯದಾಗಿದೆ ಎಂದು ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಹೊಸ ಯೋಜನೆ ಸಿದ್ಧಪಡಿಸಿತು. ಅಧಿಕಾರದ ಕೊನೆವರೆಗೂ ಸುಮ್ಮನಿದ್ದು 2018ರಲ್ಲಿ ₹139 ಕೋಟಿ ಅನುದಾನ ಬಿಡುಗಡೆ ಮಾಡಿ, ಕಾಮಗಾರಿಗೆ ಚಾಲನೆ ನೀಡಲಾಯಿತು.

₹15.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಏಳು ಅಂತಸ್ತಿನ ಬೃಹತ್ ಬಸವ ಅಂತರರಾಷ್ಟ್ರೀಯ ಕೇಂದ್ರ ಇಂದಿನವರೆಗೆ ಬಳಕೆಯಾಗಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕೊನೆ ಗಳಿಗೆಯಲ್ಲಿ ಇದರ ಉದ್ಘಾಟನೆ ಮಾಡಲು ಮುಂದಾಗಿತ್ತು. ₹1.80 ಕೋಟಿ ವೆಚ್ಚದಲ್ಲಿ ಬಿಳಿ ಬಣ್ಣ ಬಳಿದು, ವಿವಿಧ ಕಾಮಗಾರಿ ಮಾಡಲಾಯಿತು. ಆದರೂ, ಉದ್ಘಾಟನೆಯಾಗಲಿಲ್ಲ. ಎರಡೂವರೆ ವರ್ಷದಿಂದ ಬೀಗ ಜಡಿಯಲಾಗಿದೆ.

ಅನುಷ್ಠಾನ ಸಮಿತಿ ಸಭೆಗೆ ಸೀಮಿತ

ಕಾಮಗಾರಿ ಮಂದಗತಿಯಲ್ಲಿ ನಡೆದಿರುವುದನ್ನು ಗಮನಿಸಿ, ಬೇಗನೆ ಪೂರ್ಣಗೊಳಿಸುವ ಸಲುವಾಗಿ ಅನುಷ್ಠಾನ ಸಮಿತಿ ರಚಿಸಲಾಗಿದೆ. ಅನುಷ್ಠಾನ ಸಮಿತಿಯ ಸಭೆಗಳು ನಡೆದಿವೆಯಾದರೂ, ಕಾಮಗಾರಿ ಪೂರ್ಣಗೊಂಡಿಲ್ಲ.

ಕಲ್ಯಾಣ ಮಂಟಪ ನಿರ್ಮಾಣ, ಬಸವಣ್ಣ ಹಾಗೂ ಶರಣರ ಜೀವನ ಸಾರಲು ಮಿನಿ ಥಿಯೇಟರ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಅವುಗಳ ನಿರ್ಮಾಣ ಆರಂಭವಾಗಿಲ್ಲ.

ಸ್ನಾನಘಟ್ಟ ನನೆಗುದಿಗೆ: ನಾಡಿನ ವಿವಿಧ ಭಾಗಗಳಿಂದ ನಿತ್ಯ ಕೂಡಲಸಂಗಮಕ್ಕೆ ಅಪಾರ ಭಕ್ತರು ಬರುತ್ತಾರೆ. ಅವರ ಅನುಕೂಲಕ್ಕಾಗಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಸ್ನಾನ ಘಟ್ಟ ಮತ್ತು ಬಟ್ಟೆ ಬದಲಾಯಿಸುವ ಕೊಠಡಿಗಳ ನಿರ್ಮಾಣಕ್ಕೆ 2018ರಲ್ಲಿ ಚಾಲನೆ ನೀಡಲಾಯಿತು. ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ.

ನಿರ್ಮಾಣವಾಗದ ಶರಣ ಗ್ರಾಮ

ಬಸವಾದಿ ಶರಣರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ 2018ರಲ್ಲಿ ಶರಣ ಗ್ರಾಮ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಅದಕ್ಕಾಗಿ ₹5.38 ಕೋಟಿ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು.

20 ಎಕರೆ ಪ್ರದೇಶದಲ್ಲಿ ಬಸವಣ್ಣನವರ ಸಮಕಾಲೀನ 770 ಶರಣರ ಮೂರ್ತಿಗಳನ್ನು ನಿರ್ಮಿಸಿ ಅವರ ಬದುಕು, ಸಂದೇಶಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಕಾಮಗಾರಿ ಆರಂಭಗೊಂಡೇ ಇಲ್ಲ.

ಕೂಡಲಸಂಗಮ ಅಭಿವೃದ್ಧಿ ಆಗಬೇಕೆಂಬ ಬಸವ ಭಕ್ತರ ಬಹುವರ್ಷಗಳ ಬೇಡಿಕೆ ನನೆಗುದಿಗೆ ಬಿದ್ದಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು.
-ಮಹದೇಶ್ವರ ಸ್ವಾಮೀಜಿ, ಬಸವಧರ್ಮ ಪೀಠ, ಕೂಡಲಸಂಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.