ಕೂಡಲಸಂಗಮ: ಕೂಡಲಸಂಗಮ ಪುನರ್ ವಸತಿ ಕೇಂದ್ರದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ವಸತಿ ನಿಲಯ ಮಾದರಿ 4ರ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು ಎಂಬುದು ಕೂಡಲಸಂಗಮ ಸುತ್ತಮುತ್ತಲಿನ ಗ್ರಾಮದ ಜನರು ಆಗ್ರಹ.

ಕೂಡಲಸಂಗಮ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ ವಸತಿ ನಿಲಯ ಮಾದರಿ 4ರಲ್ಲಿ 200 ವಿದ್ಯಾರ್ಥಿನಿಯರು ಇರಲು ವ್ಯವಸ್ಥೆ ಇದೆ. ಸದ್ಯ 100 ವಿದ್ಯಾರ್ಥಿನಿಯರು ಇದ್ದು, ಇನ್ನು 50 ಸಂಖ್ಯೆ ಹೆಚ್ಚಿಸಿದರೆ ಯಾವುದೇ ತೊಂದರೆ ಆಗುವುದಿಲ್ಲ.

ಪ್ರೌಢ ಶಾಲಾ ಶಿಕ್ಷಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ವಂಚಿತರಾಗಬಾರದು ಎಂದು ಸರ್ಕಾರ ಈ ವಸತಿ ನಿಲಯ ಆರಂಭಿಸಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಈ ವಸತಿ ನಿಲಯದಲ್ಲಿ ಇದ್ದು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ತರಗತಿಗೆ 50 ವಿದ್ಯಾರ್ಥಿನಿಯರಂತೆ 9, 10ನೇ ತರಗತಿಯ 100 ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ಇದ್ದು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ 8ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಈ ವಸತಿ ನಿಲಯದಲ್ಲಿ ಪ್ರವೇಶ ಪಡೆಯುತ್ತಾರೆ. ಪ್ರತಿ ವರ್ಷ 30 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಈ ವಸತಿ ನಿಲಯದಲ್ಲಿ ನೇರ ಪ್ರವೇಶ ಪಡೆಯುತ್ತಿದ್ದರು. ಉಳಿದ 20 ಸ್ಥಾನಗಳಿಗೆ 200 ರಿಂದ 300 ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸುತ್ತಿದ್ದರು. ಅದರಲ್ಲಿ 20 ವಿದ್ಯಾರ್ಥಿನಿಯರು ಆಯ್ಕೆಯಾಗುತ್ತಿದ್ದರು.

ಕಳೆದ ವರ್ಷ ಕಸ್ತೂರಿಬಾ ಗಾಂಧಿ ಬಾಲಿಕಾ ವಸತಿ ಶಾಲೆ ಮಾದರಿ 1ರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿದ ಪರಿಣಾಮ ಈ ವರ್ಷ 8ನೇ ತರಗತಿಯನ್ನು 50 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಮಾದರಿ 4ರ ವಸತಿ ನಿಲಯಕ್ಕೆ ನೇರ ಪ್ರವೇಶ ಪಡೆಯುವರು. 9ನೇ ತರಗತಿಗೆ ಎಲ್ಲ 50 ನೇರ ಪ್ರವೇಶ ದೊರಕಿರುವುದರಿಂದ ಉಳಿದ ವಿದ್ಯಾರ್ಥಿನಿಯರಿಗೆ ಪ್ರವೇಶ ದೊರಯುತ್ತಿಲ್ಲ.

ಕೂಡಲಸಂಗಮ ಸುತ್ತಮುತ್ತಲಿನ 30ಕ್ಕೂ ಅಧಿಕ ಗ್ರಾಮದ ಬಡಕುಟುಂಬಗಳು ತಮ್ಮ ಹೆಣ್ಣು ಮಕ್ಕಳಿಗೆ ಈ ವಸತಿ ನಿಲಯಕ್ಕೆ ಸೇರಲು ಬಯಸಿದ್ದಾರೆ. ಆದರೆ ಪ್ರವೇಶ ಪಡೆಯಲು ಸೀಟ್ಗಳು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಪ್ರವೇಶಗಳಿಗೆ ಬೇಡಿಕೆ ಹೆಚ್ಚಿದ್ದು ಸರ್ಕಾರ ಈ ವಸತಿ ನಿಲಯಕ್ಕೆ 50 ಸೀಟ್ ಹೆಚ್ಚಳ ಮಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-1698782846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.