ಕೂಡಲಸಂಗಮ: ದಕ್ಷಿಣದ ಕಾಶಿ ಎಂಬ ಖ್ಯಾತಿಯ ಕೂಡಲಸಂಗಮದ ಸಂಗಮೇಶ್ವರ ಜಾತ್ರೆ ಏ. 7ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ಶತಮಾನಗಳ ಇತಿಹಾಸ ಹೊಂದಿದ ಈ ವೈಭವದ ಜಾತ್ರೆ ಚೈತ್ರ ಬಹುಳ ಪಂಚಮಿಯಂದು ಜರುಗಲಿದೆ. ನಾಡಿನ ತುಂಬ ಅಪಾರ ಭಕ್ತಸಮೂಹ ಹೊಂದಿದ ಸಂಗಮೇಶ್ವರನ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.

ಜಾತ್ರೆ ನಿಮಿತ್ತ ಕ್ಷೇತ್ರದಲ್ಲಿ ಗ್ರಾಮಸ್ಥರಿಂದ ವಿವಿಧ ಧಾರ್ಮಿಕ ಆಚರಣೆಗಳು ಒಂಬತ್ತು ದಿನಗಳ ಕಾಲ ನಡೆಯಲಿವೆ. ನಿತ್ಯ ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಪುರವಂತರ ಮೆರವಣಿಗೆ ಜರುಗಲಿವೆ. ಏ. 7ರಂದು ಬೆಳಿಗ್ಗೆ 6ಕ್ಕೆ ಉತ್ಸವಮೂರ್ತಿಯ ರಥೋತ್ಸವ, ಸಂಜೆ 6ಕ್ಕೆ ವೈಭವದ ಸಂಗಮೇಶ್ವರ ರಥೋತ್ಸವ ನಡೆಯಲಿದೆ.

ಸಂಗಮೇಶ್ವರ ದೇವಾಲಯವು ಕೃಷ್ಣಾ ಹಾಗೂ ಮಲಪ್ರಭೆಯ ಸಂಗಮದ ಸ್ಥಾನದಲ್ಲಿ ಇದೆ. ಈ ದೇವಾಲಯವನ್ನು 9ನೇ ಶತಮಾನದಲ್ಲಿ ಚಾಲಕ್ಯ ಶೈಲಿಯಲ್ಲಿ ನಿರ್ಮಿಸಲಾಗಿದೆ ಎಂದು ಶಾಸನದಲ್ಲಿ ಉಲ್ಲೇಖವಿದೆ. 1997ರಲ್ಲಿ ಸರ್ಕಾರ ಕೂಡಲಸಂಗಮ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವ ಮೂಲಕ ಈ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಮಾಡಿತು. ಅದರ ಫಲವಾಗಿ ಇಂದು ನಿತ್ಯ ಸಾವಿರಾರು ಪ್ರವಾಸಿಗರು ಈ ಕ್ಷೇತ್ರ ವೀಕ್ಷಿಸಲು ಬರುವರು.

ಸಂಗಮೇಶ್ವರ ರಥಕ್ಕೆ ಬಂಗಾರದ ಲೇಪವುಳ್ಳ ಭವ್ಯ ಕಳಸವನ್ನು ಮಾಡಿಸಿಕೊಟ್ಟವರು ಅಮರಾವತಿಯ ದೇಸಾಯಿಯವರು. ಈ ಮೊದಲು ಕಳಸವು ಜಾತ್ರೆಯ ಒಂದು ದಿನ ಮೊದಲು ಅಮರಾವತಿಯಿಂದಲೇ ಬರುತ್ತಿತ್ತು ಎಂದು ಹೇಳಲಾಗುತ್ತದೆ.

ಸದ್ಯ ಈ ಬಂಗಾರದ ಕಳಸವನ್ನು ಬಾಗಲಕೋಟೆಯಿಂದ ಮೆರವಣಿಗೆಯಲ್ಲಿ ಪಾದಯಾತ್ರೆಯ ಮೂಲಕ ಸಂಗಮಕ್ಕೆ ತರಲಾಗುತ್ತದೆ. ಈ ಕಳಸ ಬರುವಾಗ ಹಳ್ಳೂರ, ಬೇವೂರ, ಭಗವತಿ, ಕಿರಸೂರು, ಮಲ್ಲಾಪುರ ಮುಂತಾದ ಗ್ರಾಮದ ಜನರು ಪೂಜೆ ಮಾಡಿ ಜಾತ್ರೆಗೆ ಕಳುಹಿಸುತ್ತಾರೆ. ಕೂಡಲಸಂಗಮಕ್ಕೆ ಬಂದ ಕಳಸವನ್ನು ಮೆರವಣಿಗೆಯ ಮೂಲಕ ಕೂಡಲಸಂಗಮದ ಅಗಸಿಯ ಹತ್ತಿರ ಇರುವ ಹಾಳಕೇರಿಯವರ ಕಳಸದ ಕಟ್ಟೆಯ ಮೇಲೆ ಇಡಲಾಗುವುದು ಸಂಜೆ 5ರವರೆಗೆ ಭಕ್ತರು ಬಂದು ಕಳಸದ ದರ್ಶನ ಪಡೆಯುವರು. ನಂತರ ಸಂಗಮೇಶ್ವರ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ರಥವನ್ನು ಸಂಜೆ 6ಕ್ಕೆ ಎಳೆಯವರು. ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು, ರಾಜಕಾರಣಿಗಳು ಭಾಗವಹಿಸುವರು.

ವಿವಿಧ ಗ್ರಾಮಸ್ಥರ ಪಾಲ್ಗೊಳ್ಳುವಿಕೆ: ಸಂಗಮನಾಥನ ಜಾತ್ರೆಗೆ ಹಲವು ಗ್ರಾಮಗಳ ಜನರು ವಿವಿಧ ಕಾರ್ಯಗಳಲ್ಲಿ ತೊಡಗುವ ಮೂಲಕ ಜಾತ್ರೆಯಲ್ಲಿ ಪಾಲ್ಗೊಳ್ಳುವರು. ಬೆಳಗಲ್ಲ ಗ್ರಾಮದಿಂದ ತೇರಿನ ಹಗ್ಗ, ಗಂಜೀಹಾಳ ಗ್ರಾಮದಿಂದ ಬಾಳೆಕಂಬ, ತಳಿರು ತೋರಣ ಬರುತ್ತದೆ. ಇದ್ದಲಗಿಯ ಹಿಲಾಲು, ತಂಗಡಗಿಯ ನೀಲಮ್ಮನ ಪಲ್ಲಕ್ಕಿ, ಗುಳೇದಗುಡ್ಡದಿಂದ ಉತ್ಸವಮೂರ್ತಿಯ ಕಳಸ ಬರುತ್ತದೆ. ಎಲ್ಲ ಗ್ರಾಮಗಳ ಜನರೂ ಪಲ್ಲಕ್ಕಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸುವರು.

ಸಂಗಮನಾಥನಿಗೆ ವಿವಿಧ ಪೂಜೆಗಳು

ಸಂಗಮನಾಥನಿಗೆ ಜಾತ್ರೆ ನಿಮಿತ್ತ ಐದು ಪೂಜೆಗಳು ನಡೆಯುತ್ತವೆ. ಬೆಳಗಿನ 5ಕ್ಕೆ ದೇವರ ಪೂಜೆ, 6 ಕ್ಕೆ ರುದ್ರಾಭಿಷೇಕ ಪೂಜೆ, ಮಧ್ಯಾಹ್ನ 12ಕ್ಕೆ ಧೂಪಾರತಿ, ಪೂಜೆ ಸಂಜೆ 5ಕ್ಕೆ ದೇವರ ಪೂಜೆ, ರಾತ್ರಿ 8.30ಕ್ಕೆ ಮಹಾಮಂಗಳಾರತಿ ಪೂಜೆ ನಡೆಯಲಿದೆ. ಜಾತ್ರೆ ನಿಮಿತ್ತ ದೇವಾಲಯ, ಪ್ರವೇಶ ದ್ವಾರ, ಬಸವೇಶ್ವರ ವೃತ್ತ, ಚಾಲುಕ್ಯ ಮಹಾದ್ವಾರ ಬಣ್ಣ ಬಣ್ಣದ ದೀಪಗಳಿಂದ ಸಿಂಗಾರಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.