ಕುಳಗೇರಿ ಕ್ರಾಸ್: ಸಂಗೊಳ್ಳಿ ರಾಯಣ್ಣ ವೃತ್ತದ ಎದುರಿಗೆ ಇರುವ ಗ್ರಾಮ ಒನ್ ಕೇಂದ್ರ ಹಾಗೂ ಪೊಲೀಸ್ ಹೊರ ಠಾಣೆಯ ಮುಂಭಾಗ ದಲ್ಲಿರುವ ಗ್ರಾಮ ಒನ್ ಕೇಂದ್ರಗಳು ವರ್ಷಗಳ ಹಿಂದೆಯೇ ಮುಚ್ಚಿವೆ. ಈ ಗ್ರಾಮ ಒನ್ ಕೇಂದ್ರಗಳು ಮುಚ್ಚಿ ವರ್ಷ ಕಳೆದರೂ ಹೊಸ ಗ್ರಾಮ ಒನ್ ಕೇಂದ್ರ ತೆರೆಯದೇ ಇರುವುದರಿಂದ ಜನರಿಗೆ ಸಂಕಷ್ಟ ಎದುರಾಗಿದೆ.

ಗ್ರಾಮದಿಂದ 1 ಕಿ.ಮೀ ದೂರದಲ್ಲಿರುವ ಖಾನಾಪುರ ಎಸ್.ಕೆ ಗ್ರಾಮದ ಬಳಿ ಇರುವ ನಾಡ ಕಾರ್ಯಾಲಯಕ್ಕೆ ವಯಸ್ಕರು ಹಾಗೂ ವಯೋವೃದ್ದರು ತೆರಳಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದು ದೂರದಲ್ಲಿ ಇರುವುದರಿಂದ ಜನರು ಖಾಸಗಿ ವಾಹನಗಳ ಮೂಲಕ ಹೆಚ್ಚಿನ ದರ ಕೊಟ್ಟು ತೆರಳಬೇಕಾದ ಪರಿಸ್ತಿತಿ ನಿರ್ಮಾಣವಾಗಿದೆ. ಇದರಿಂದ ಸ್ಥಳಿಯ ಜನರಿಗೆ ಬಹಳಷ್ಟು ಸಮಸ್ಯೆಯಾಗಿದೆ.

’ಸೋಮನಕೊಪ್ಪ, ಕುಳಗೇರಿ, ಚಿರ್ಲಕೊಪ್ಪ ಖಾನಾಪುರ ಎಸ್.ಕೆ ಹಾಗೂ ಚಿರ್ಲಕೊಪ್ಪ ಗ್ರಾಮಗಳಿಗಾಗಿ ಗ್ರಾಮ ಒನ್ ಕೇಂದ್ರ ತೆರೆಯದೇ ಇರುವುದು ನಮ್ಮ ದುರ್ದೈವ’ ಎಂದು ಪಿಕೆಪಿಎಸ್ ನಿರ್ದೆಶಕ ರಾಮನಗೌಡ ದ್ಯಾವನಗೌಡ್ರ ಅವರು ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ ಹೊರ ಹಾಕಿದರು.

ಜನರು ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಅಥವಾ ಬಾದಾಮಿ ತಾಲ್ಲೂಕಿನ ಕಾಕನೂರ, ನರಸಾಪೂರ ಹಾಗೂ ಮಮಟಗೇರಿ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಶಿವರಾಜ ಕಂಪ್ಯೂಟರ್ಸ್ಗೆ ಹೊಸ ಗ್ರಾಮ ಒನ್ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಆದೇಶ ಪತ್ರ ನೀಡಲು ಕಂದಾಯ ಇಲಾಖೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿರುವ ಗ್ರಾಮ ಒನ್ ಕೇಂದ್ರಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸ್ವಾಗತ್ ಎಂಬ ಅಧಿಕಾರಿಯಿಂದ ಈ ಸಮಸ್ಯೆಯಾಗಿದೆ ಎನ್ನುತ್ತಾರೆ ಜನರು.

ಈ ಸಂಬಂಧ ಮಾತನಾಡಿದ ಬಾದಾಮಿ ಪ್ರಭಾರ ತಹಶೀಲ್ದಾರ್ ಎಸ್.ಎಫ್.ಬೊಮ್ಮಣ್ಣ ಅವರು ’2025ರಲ್ಲಿ ಅರ್ಜಿ ಕರೆಯಲಾಗಿತ್ತು. ಆ ವೇಳೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಗ್ರಾಮ ಒನ್ ಆಯ್ಕೆ ಪ್ರಕ್ರಿಯೇ ಎಲ್ಲಿಯವರೆಗೆ ಬಂದಿದೆ ಎಂಬುದನ್ನು ಶಿರಸ್ತೆದಾರ ಅವರಿಂದ ಮಾಹಿತಿ ಪಡೆದು ಕುಳಗೇರಿ ಕ್ರಾಸಿಗೆ ಅತೀ ಶೀಘ್ರದಲ್ಲಿಯೇ ಹೊಸ ಗ್ರಾಮ ಒನ್ ಕೇಂದ್ರಗ ತೆರೆಯಲು ಕ್ರಮಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಕುಳಗೇರಿ ವಲಯದ ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ ಅವರು, 2025ರಲ್ಲಿ ಅರ್ಜಿ ಸಲ್ಲಿಸಿದ ಗ್ರಾಮ ಒನ್ ಕೇಂದ್ರಗಳನ್ನು ಆಯ್ಕೆ ಮಾಡಿದ ವರದಿಯನ್ನು ಕಂದಾಯ ಇಲಾಖೆಯ ಶಿರಸ್ತೇದಾರ್ ಮಲಾರಿ ಅವರು ಅಧಿಕಾರಿಗಳಿಗೆ ತಲುಪಿಸಿದ್ದಾರೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-19-2141973924

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.