ಕುಳಗೇರಿ ಕ್ರಾಸ್: ಗ್ರಾಮದ ಹೊರ ವಲಯದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ 11 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಒಂದು ಉಗ್ರಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು 2 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಂಕಿಗೆ ಆಹುತಿಯಾಗಿದೆ.

ಐಟಿಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಟ್ರೇಡರ್ಸಗಳಿಂದ ಸಂಗ್ರಹಿಸಿದ 2 ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಉಗ್ರಾಣದಲ್ಲಿ ಇಡಲಾಗಿತ್ತು. ಬುಧವಾರ ಬೆಳಿಗ್ಗೆ ಉಗ್ರಾಣದಲ್ಲಿ ಅಪಾರ ಪ್ರಮಾಣದಲ್ಲಿ ಹೊಗೆ ಹೊರಗಡೆ ಬರುವುದನ್ನು ಕಂಡ ರೈತರು ಸಂಬಂಧಿಸಿದ ಉಗ್ರಾಣ ಅಧಿಕಾರಿಗಳಿಗೆ ದೂರವಾಣಿಯ ಮುಖಾಂತರ ಕರೆ ಮಾಡಿ ತಿಳಿಸಿದರು.

ಒಂದೇ ಒಂದು ಅಗ್ನಿಶಾಮಕ ವಾಹನವಿರುವುದರಿಂದ ಬಾದಾಮಿ ಅಗ್ನಶಾಮಕ ದಳದ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆವರೆಗೂ ಬೆಂಕಿ ನಂದಿಸಲು ಹರಸಹಾಸಪಟ್ಟರು. ಉಗ್ರಾಣದ ಮೇಲಧಿಕಾರಿಗಳು ಬಂದು ಪರಿಶೀಲನೆ ಮಾಡಿದ ಬಳಿಕ ಹಾನಿ ವಿವರ ತಿಳಿಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-19-1151632988

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.