ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ | ಗಬ್ಬು ನಾರುತ್ತಿರುವ ‘ಹೈಟೆಕ್‌’ ಶೌಚಾಲಯಗಳು

Published 22 ಜುಲೈ 2023, 3:33 IST
Last Updated 22 ಜುಲೈ 2023, 3:33 IST
ಅಕ್ಷರ ಗಾತ್ರ

ಎಚ್.ಎಸ್.ಘಂಟಿ

ಗುಳೇದಗುಡ್ಡ: ಗುಳೇದಗುಡ್ಡ ತಾಲ್ಲೂಕು ಕೇಂದ್ರವಾಗಿರುವುದರಿಂದ ನಿತ್ಯ ಸಾವಿರಾರು ಜನ ಪಟ್ಟಣಕ್ಕೆ ಬಂದು ಹೋಗುತ್ತಾರೆ. ಆದರೆ, ಸಾರ್ವಜನಿಕ ಶೌಚಾಲಯದ ಕೊರತೆ ಜನರನ್ನು ಪರದಾಡುವಂತೆ ಮಾಡಿದೆ.

ಪುರಸಭೆ ವ್ಯಾಪ್ತಿಯಲ್ಲಿ 15ಕ್ಕೂ ಹೆಚ್ಚು ಸಾರ್ವಜನಿಕ ಶೌಚಾಲಯಗಳಿವೆ. ಅವುಗಳು ನಿರ್ವಹಣೆ ಕೊರತೆಯಿಂದ ಗಬ್ಬು ನಾರುತ್ತಿವೆ. ಶೌಚಾಲಯದೊಳಕ್ಕೆ ಹೋಗಲು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಇದೆ. ಕೆಲವು ಶೌಚಾಲಯಗಳ ಮೇಲೆ ‘ಹೈಟೆಕ್’ ಎಂದು ಬರೆಯಲಾಗಿದೆ. ಅವುಗಳ ಸ್ಥಿತಿ ಹೇಳತೀರದಾಗಿದೆ.

ಇಲ್ಲದ ನಾಮಫಲಕ

ಪಟ್ಟಣದ ಮುಖ್ಯ ರಸ್ತೆಗಳಾದ ಸರಾಫ್ ಬಜಾರ್, ಪುರಸಭೆ ಎದುರು, ಭಂಡಾರಿ ಕಾಲೇಜು, ಬನ್ನಿಕಟ್ಟಿ ಹತ್ತಿರ, ಬಜಾರದಲ್ಲಿ ಒಂದೊಂದು ಮೂತ್ರಾಲಯಗಳಿದ್ದು, ಅವುಗಳಿಗೆ ಶೌಚಾಲಯ ಎಂಬ ನಾಮಫಲಕ ಇಲ್ಲದ್ದರಿಂದ ಪಟ್ಟಣಕ್ಕೆ ಬರುವ ಹೊಸಬರಿಗೆ ತಿಳಿಯುವುದಿಲ್ಲ. ಹೀಗಾಗಿ ಕೇಳಿ ಹುಡುಕಿಕೊಂಡು ಹೋಗುವ ಸ್ಥಿತಿ ಇದೆ.

ಶೌಚಾಲಯಗಳ ನಿರ್ವಹಣೆ ಬಗೆಗೆ ಮಾಹಿತಿ ಇಲ್ಲ. ನಾನೇ ಪರಿಶೀಲನೆ ಮಾಡಿ ಸ್ವಚ್ಛವಾಗಿಡಲು ಕ್ರಮಕೈಗೊಳ್ಳುತ್ತೇನೆ.
ಎ.ಎಚ್.ಮುಜಾವರ, ಮುಖ್ಯಾಧಿಕಾರಿ ಪುರಸಭೆ

ಶೌಚಾಲಯಗಳು ಮೂತ್ರ ವಿಸರ್ಜನೆಗಷ್ಟೇ ವ್ಯವಸ್ಥೆ ಇದೆ. ಮಲ ವಿಸರ್ಜನೆಗೆ ಇಲ್ಲವಾದ್ದರಿಂದ ತುರ್ತಾಗಿ ಹೋಗಬೇಕಾದವರು ಬಯಲೇ ಗತಿ ಎಂಬಂತಾಗಿದೆ.

ಪುರಸಭೆಯವರು ಹೈಟೆಕ್ ಶೌಚಾಲಯ ಕಟ್ಟಿಸಿ ಖಾಸಗಿಯವರಿಗೆ ನಿರ್ವಹಣೆ ನೀಡಿದರೆ, ಉತ್ತಮ ನಿರ್ವಹಣೆ ಮಾಡುತ್ತಾರೆ. ಗುಲಾಬ ಚಿತ್ರಮಂದಿರ ಬಳಿ ಇದೆ ಎನ್ನುವುದು ಪರುಸಭೆ ಅಧಿಕಾರಿಗಳ ಹೇಳಿಕೆ. ಅಲ್ಲಿ ಕಲ್ಲು, ಮುಳ್ಳು, ಹೊಲಸು ತುಂಬಿದ್ದು, ಸಮೀಪ ಸುಳಿಯಲಾರದ ಸ್ಥಿತಿ ಇದೆ ಎಂದು ಹಾನಾಪುರ ಎಸ್.ಪಿ ಗ್ರಾಮದ ಶ್ರೀನಿವಾಸ ನೆಲ್ಲೂರ ತಿಳಿಸಿದರು.

ಅಪಾಯದ ಶೌಚಾಲಯ

ಭಂಡಾರಿ ಕಾಲೇಜು ಸರ್ಕಲ್‍ನಲ್ಲಿರುವ ಸಾರ್ವಜನಿಕ ಶೌಚಾಲಯ ಗಬ್ಬು ನಾರುತ್ತಿದ್ದು, ಒಳಗೆ ಹೋಗಲು ಭಯವಾಗುತ್ತದೆ. ಸಿಮೆಂಟ್ ಉದುರಿ ಬಿದ್ದಿದ್ದು, ಕಬ್ಬಿಣದ ರಾಡುಗಳು ಕಾಣುತ್ತಿವೆ. ಅದರ ಮೇಲೆ ಒಂದು ಕಲ್ಲು ಹಾಕಲಾಗಿದೆ. ಅದೂ ಬೀಳುವ ಸ್ಥಿತಿಯಲ್ಲಿದೆ. 

ಹಲವು ಭಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಲವು ಸಲ ಖರ್ಚು ಮಾಡಿದ್ದರೂ, ನಿರ್ವಹಣೆಯಿಂದ ಬಳಲುತ್ತಿರುವುದು ವಿಷಾದದ ಸಂಗತಿ ಎಂದು ಪುರಸಭೆ ಸದಸ್ಯ ಉಮೇಶ ಹುನಗುಂದ ಹೇಳಿದರು

ಪುರಸಭೆ ಎದುರಿಗೆ ಇದ್ದರೂ ಯಾರಿಗೂ ಗೊತ್ತಾಗದೆ ಫಲಕ ಇಲ್ಲದೆ ಇರುವುದು.
ಪುರಸಭೆ ಎದುರಿಗೆ ಇದ್ದರೂ ಯಾರಿಗೂ ಗೊತ್ತಾಗದೆ ಫಲಕ ಇಲ್ಲದೆ ಇರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT